alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ನಲ್ಲಿ ವಿದ್ಯಾರ್ಥಿನಿ ಮುಂದೆಯೇ ಹಸ್ತಮೈಥುನ

ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳ ಜೊತೆ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ಅಶ್ಲೀಲವಾಗಿ ನಡೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಅಶ್ಲೀಲವಾಗಿ ವರ್ತಿಸಿದ ವ್ಯಕ್ತಿಯ ವಿಡಿಯೋ ಮಾಡಿ ವಿದ್ಯಾರ್ಥಿನಿ ಟ್ವೀಟರ್ ಗೆ ಹಾಕಿದ್ದಾಳೆ. ಮಹಿಳಾ ಆಯೋಗ ಬಿಟ್ಟು ದೆಹಲಿ ಮುಖ್ಯಮಂತ್ರಿ ಕಚೇರಿ, ದೆಹಲಿ ಪೊಲೀಸ್ ಕಮಿಷನರ್, ದೆಹಲಿ ಪೊಲೀಸರಿಂದ ಮೂರು ದಿನವಾದ್ರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲವೆಂದು ವಿದ್ಯಾರ್ಥಿನಿ ದೂರಿದ್ದಾಳೆ.

ಫೆಬ್ರವರಿ 7ರಂದು ವಿದ್ಯಾರ್ಥಿನಿ ಕಾಲೇಜಿಗೆ ತೆರಳಲು ಬಸ್ ಹತ್ತಿದ್ದಳಂತೆ. ಎರಡನೇ ನಂಬರ್ ಸೀಟ್ ನಲ್ಲಿ ಕುಳಿತಿದ್ದ ವಿದ್ಯಾರ್ಥಿನಿ ಪಕ್ಕಕ್ಕೆ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಬಂದು ಕುಳಿತನಂತೆ. ಕೆಲವೇ ನಿಮಿಷಗಳಲ್ಲಿ ಕಿರುಕುಳ ನೀಡಲು ಶುರುಮಾಡಿದ ವ್ಯಕ್ತಿ ವಿದ್ಯಾರ್ಥಿನಿ ಅಂಗವನ್ನು ಸ್ಪರ್ಶಿಸಿದ್ದಾನಂತೆ. ಇದ್ರಿಂದ ಭಯಗೊಂಡು ವಿದ್ಯಾರ್ಥಿನಿ ನೆರವಿಗೆ ಕೂಗಿದ್ದಾಳಂತೆ. ಆದ್ರೆ ಬಸ್ ನಲ್ಲಿದ್ದ ಯಾರೂ ನೆರವಿಗೆ ಬಂದಿಲ್ಲವಂತೆ.

ಇಷ್ಟೇ ಅಲ್ಲ ವ್ಯಕ್ತಿ ಬಸ್ ನಲ್ಲಿಯೇ ವಿದ್ಯಾರ್ಥಿನಿ ಮುಂದೆ ಹಸ್ತಮೈಥುನ ಮಾಡಿದ್ದಾನಂತೆ. ಅಶ್ಲೀಲ ವರ್ತನೆ ವಿಡಿಯೋ ಮಾಡಿದ ವಿದ್ಯಾರ್ಥಿನಿ ಟ್ವೀಟರ್ ನಲ್ಲಿ ತನ್ನ ನೋವು ತೋಡಿಕೊಂಡಿದ್ದಾಳೆ. ಫೆಬ್ರವರಿ 10ರಂದು ಮಹಿಳಾ ಆಯೋಗ ವಿದ್ಯಾರ್ಥಿನಿ ಸಂಪರ್ಕಿಸಿದ್ದಲ್ಲದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನೆರವಾಗಿದೆಯಂತೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...