alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದ ಅಮಲಿನಲ್ಲಿ ಹುಡುಗಿ ಮಾಡಿದ್ಲು ಈ ಕೆಲಸ

drunk-woman

ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್ ಪದೇ ಪದೇ ಸುದ್ದಿಯಾಗ್ತಾ ಇದೆ. ಕುಡಿದು ದಾಂಧಲೆ ನಡೆಸುತ್ತಿರುವ ಹುಡುಗಿಯರ ಸಂಖ್ಯೆ ಅಲ್ಲಿ ಹೆಚ್ಚಾಗ್ತಾ ಇದೆ. ಈಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ.

ರಾಯ್ಪುರ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ಘಟನೆ ನಡೆದಿದೆ. ಫುಲ್ ಟೈಟಾದ ಹುಡುಗಿಯೊಬ್ಬಳು ಮರಕ್ಕೆ ತಲೆ ಚಚ್ಚಿ ಕೊಳ್ತಿದ್ದಳಂತೆ. ಆಕೆಯನ್ನು ನೋಡಿದ ಸುತ್ತಮುತ್ತಲ ಜನ, ಮರಕ್ಕೆ ತಲೆ ಗುದ್ದಿಕೊಳ್ತಿದ್ದ ಹುಡುಗಿಯ ರಕ್ಷಣೆಗೆ ಮುಂದಾಗಿದ್ದಾರೆ. ಆದ್ರೆ ಅದು ಸಾಧ್ಯವಾಗಲಿಲ್ಲ. ಆಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ಠಾಣೆಗೆ ಕರೆ ತಂದಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ. ಹುಡುಗಿಗೆ ಕೂಡ ಎಚ್ಚರಿಕೆ ನೀಡಿದ್ದಾರೆ. ಡೆಹ್ರಾಡೂನ್ ನಲ್ಲಿ ಕಳೆದ ಕೆಲ ತಿಂಗಳಿಂದ ಇಂತ ಘಟನೆಗಳು ಮರುಕಳಿಸುತ್ತಿವೆ. ಕುಡಿದು ಬೀದಿಯಲ್ಲಿ ರಂಪ ಮಾಡಿದ ಆರನೇ ಘಟನೆ ಇದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...