alex Certify
ಕನ್ನಡ ದುನಿಯಾ       Mobile App
       

Kannada Duniya

ನಶೆಯಲ್ಲಿದ್ದ ಅಪರಿಚಿತ ಯುವತಿ ಮಾಡಿದ್ದೇನು..?

21_07_2016-hsp1

ಪಂಜಾಬ್ ನ ಹೋಶಿಯಾರ್ ಪುರದಲ್ಲಿ ಕುಡಿದ ಮತ್ತಿನಲ್ಲಿದ್ದ ಯುವತಿಯೊಬ್ಬಳು ಅವಾಂತರ ಸೃಷ್ಟಿಸಿದ್ದಾಳೆ. ಅಪರಿಚಿತ ಯುವತಿಯೊಬ್ಬಳು ಮನೆಯೊಂದಕ್ಕೆ ನುಗ್ಗಿದ್ದಾಳೆ. ಅಲ್ಲಿದ್ದ ಮಹಿಳೆಗೆ ಹೊಡೆಯಲು ಯತ್ನಿಸಿದ್ದಲ್ಲದೆ ಮಹಡಿ ಮೇಲೇರಿ ಕುಳಿತಿದ್ದಳು.

ಬೆಳ್ಳಂಬೆಳಿಗ್ಗೆ ಸುದೇಶಾ ಕುಮಾರಿ ಎಂಬಾಕೆ ಮನೆಗೆ ಅಪರಿಚಿತ ಯುವತಿ ನುಗ್ಗಿದ್ದಾಳೆ. ನಶೆಯಲ್ಲಿದ್ದ ಆಕೆ ನೇರವಾಗಿ ಫ್ರಿಜ್ ಬಳಿ ಹೋಗಿ ಮಾವಿನ ಹಣ್ಣು ತಿನ್ನಲು ಮುಂದಾಗಿದ್ದಾಳೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸುದೇಶಾ ಕುಮಾರಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾಳೆ.

ನಂತ್ರ ನೇರವಾಗಿ ಮಹಡಿ ಹತ್ತಿ ಕುಳಿತಿದ್ದಾಳೆ ನಶೆಯಲ್ಲಿದ್ದ ಯುವತಿ. ಅಲ್ಲಿಗೆ ಸುದೇಶಾ ಬರದಂತೆ ಬಾಗಿಲು ಹಾಕಿದ್ದಾಳೆ. ಇದರಿಂದ ಭಯಗೊಂಡ ಸುದೇಶಾ ನೆರೆಯವರನ್ನು ಕರೆದಿದ್ದಾಳೆ. ನೆರವಿಗೆ ಬಂದ ಸ್ಥಳೀಯರು ಹರಸಾಹಸಪಟ್ಟು ಆಕೆಯ ಕೈಕಾಲನ್ನು ಕಟ್ಟಿ ಹಾಕಿದ್ದಾರೆ. ಕರೆ ಮಾಡಿ ಗಂಟೆಯಾದ ಮೇಲೆ ಬಂದ ಪೊಲೀಸರು ಮೊದಲು ಠಾಣೆಗೆ ಕರೆದುಕೊಂಡು ಹೋಗಿ ನಂತ್ರ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಶೆಯಲ್ಲಿರುವ ಆಕೆ ಸರಿಯಾಗಿ ಏನನ್ನೂ ಹೇಳ್ತಾ ಇಲ್ಲ. ಒಂದೊಂದು ಬಾರಿ ಒಂದೊಂದು ಹೆಸರು ವಿಳಾಸ ಹೇಳುವ ಯುವತಿಗೆ ಚಿಕಿತ್ಸೆ ನಡೆಯುತ್ತಿದೆ. ನಶೆ ಸಂಪೂರ್ಣ ಇಳಿದು ಸರಿಯಾದ ಮಾಹಿತಿ ನೀಡಿದ ನಂತ್ರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...