alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಜೊತೆ ಜಗಳವಾಡಿ ಮಕ್ಕಳಿಬ್ಬರನ್ನು ಹತ್ಯೆಗೈದ ಪಾಪಿ

ಪತ್ನಿ ತನ್ನ ಜತೆ ವಾದಕ್ಕಿಳಿದಳು ಎಂಬ ಕಾರಣಕ್ಕೆ ಇಬ್ಬರು ಹೆಣ್ಣುಮಕ್ಕಳನ್ನು ಅಮಾನುಷವಾಗಿ ತಂದೆಯೇ ಹತ್ಯೆ ಮಾಡಿರುವ ದುರ್ಘಟನೆ ಉತ್ತರಪ್ರದೇಶದ ಸುರ್ಜಾಪುರ ಎಂಬಲ್ಲಿ ಸಂಭವಿಸಿದೆ.

ಪಾನಮತ್ತನಾಗಿದ್ದ ಹರಿ ಸೋಲಂಕಿ ಎಂಬಾತನೇ ತನ್ನ ಕರುಳ ಕುಡಿಗಳನ್ನೇ ಹತ್ಯೆಗೈದಿರುವ ಪಾಪಿ ತಂದೆ. ಆರು ವರ್ಷದ ಒಬ್ಬಳು ಹಾಗೂ ಮೂರು ವರ್ಷದ ಮತ್ತೊಬ್ಬ ಮಗಳನ್ನು ಹತ್ಯೆ ಮಾಡಿದ್ದಾನೆ.

ಪತ್ನಿಯೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿರುವ ಒಬ್ಬ ಹೆಣ್ಮಗಳ ಶವ ಮನೆಯಲ್ಲಿಯೇ ಸಿಕ್ಕರೆ ಮತ್ತೊಂದು ಸಮೀಪದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...