alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ಕಳೆದುಕೊಂಡು 90 ಕಿಮೀ ನಡೆದ ವ್ಯಾಪಾರಿ

ಅಸ್ಸಾಂನಲ್ಲಿ ಕಳೆದ ಶುಕ್ರವಾರ ನಾಪತ್ತೆಯಾಗಿದ್ದ ತರಕಾರಿ ವ್ಯಾಪಾರಿಯೊಬ್ಬ 90 ಕಿಮೀ ದೂರ ನಡೆದುಕೊಂಡೇ ಮನೆ ಸೇರಿದ್ದಾನೆ. ಜೆಬಿಲ್ ಸಂಗ್ಮಾ ಸತತ ಮೂರು ದಿನಗಳ ಕಾಲ ಎಡೆಬಿಡದೆ ನಡೆದಿದ್ದಾನೆ. ಹೊಟ್ಟೆ ತುಂಬಿಸಿಕೊಳ್ಳಲು ಡಸ್ಟ್ ಬಿನ್ ಗಳಲ್ಲಿ ಸಿಕ್ಕ ಹಳಸಿದ ಆಹಾರ ತಿಂದಿದ್ದಾನೆ.

ಬೆಳಗ್ಗೆ ತರಕಾರಿ ಮಾರಲು ಸ್ನೇಹಿತನ ಜೊತೆಗೆ ಜೆಬಿಲ್ ಗೆ ರಿಕ್ಷಾ ಏರಿ ಗುವಾಹಟಿಯ ಮಾರುಕಟ್ಟೆಗೆ ಹೋಗಿದ್ದ. ಇವರ ಬಳಿ ಹಣ ಪಡೆಯದ ಆಟೋ ಚಾಲಕ, ಸಂಜೆ ವಾಪಸ್ ಬರುವಾಗ ನಿಮ್ಮನ್ನು ಕರೆತರುತ್ತೇನೆ, ಉಳಿದ ತರಕಾರಿ ಮಾರಲು ನೆರವಾಗುತ್ತೇನೆ ಎಂದಿದ್ದ.

ಅದರಂತೆ ಸಂಜೆ ಉಳಿದ ತರಕಾರಿಗಳನ್ನು ಕೊಳ್ಳಲು ವ್ಯಾಪಾರಿಯೊಬ್ಬನನ್ನು ಕರೆದುಕೊಂಡು ಬಂದಿದ್ದ. ಆದ್ರೆ ತರಕಾರಿ ಖರೀದಿಸಲು ಒಪ್ಪದ ವ್ಯಾಪಾರಿ ಅದನ್ನು ಬೇಕಾದ್ರೆ ಅಂಗಡಿಯಲ್ಲಿಡ್ತೇನೆ, ನಾಳೆ ತೆಗೆದುಕೊಂಡು ಹೋಗಿ ಅಂತಾ ಹೇಳಿದ್ದ.

ಕೊನೆಗೆ ಜೆಬಿಲ್ ಮತ್ತವನ ಸ್ನೇಹಿತ ಇಬ್ಬರೂ ಆಟೋದಲ್ಲಿ ತರಕಾರಿ ಹೇರಿಕೊಂಡು ಅಂಗಡಿಯತ್ತ ತೆರಳಿದ್ದಾರೆ. ಈ ವೇಳೆ ಆಟೋ ಚಾಲಕ ಇಬ್ಬರಿಗೂ ತಂಪು ಪಾನೀಯ ಕೊಟ್ಟಿದ್ದ. ಮುಂದೇನು ನಡೀತು ಅನ್ನೋದು ಜೆಬಿಲ್ ಗೆ ಗೊತ್ತೇ ಆಗಿರಲಿಲ್ಲ. ಎಚ್ಚರವಾಗುವಷ್ಟರಲ್ಲಿ ಆತ ಬೋಂಗೈಗಾನ್ ರೈಲು ನಿಲ್ದಾಣದಲ್ಲಿದ್ದ.

ಅವನ ಬಳಿಯಿದ್ದ ಹಣ ಮತ್ತು ಮೊಬೈಲ್ ಫೋನ್ ಮಾಯವಾಗಿತ್ತು. ಸ್ನೇಹಿತ ಕಲ್ಮೆನ್ ಕೂಡ ಅಲ್ಲಿ ಇರಲಿಲ್ಲ. ಬಿಡಿಗಾಸೂ ಇಲ್ಲದೇ ಇದ್ದಿದ್ರಿಂದ ಅಲ್ಲಿಂದ ನಡೆದುಕೊಂಡೇ ಹೊರಟಿದ್ದಾನೆ. ಮೂರು ದಿನಗಳ ನಂತರ ಗ್ರಾಮಕ್ಕೆ ಬಂದು ತಲುಪಿದ್ದ ಜೆಬಿಲ್, ಆಯಾಸದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...