alex Certify
ಕನ್ನಡ ದುನಿಯಾ       Mobile App
       

Kannada Duniya

ಹಗಲು ಆಟೋ ಚಾಲಕ, ರಾತ್ರಿಯಾದ್ರೆ….

thief-334ಆತ ಹಗಲು ಹೊತ್ತಿನಲ್ಲಿ ಸಂಭಾವಿತ ಆಟೋ ಚಾಲಕ. ರಾತ್ರಿಯಾದ್ರೆ ಮಾತ್ರ ಆತನ ವರಸೆಯೇ ಬದಲಾಗುತ್ತಿತ್ತು. ಆತನ ಕೃತ್ಯವೆಲ್ಲಾ ಸಿಸಿ ಟಿವಿ ಯಲ್ಲಿ ಸೆರೆಯಾಗದಿದ್ದರೆ ಆತ ತನ್ನ ಕುಕೃತ್ಯವನ್ನು ನಿರಾತಂಕವಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದ. ಕಡೆಗೂ ಆತನನ್ನು ಬಂಧಿಸುವಲ್ಲಿ ಚೆನ್ನೈ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೌದು ಅಂತದೊಂದು ಪ್ರಕರಣ ಚೆನ್ನೈನಿಂದ ವರದಿಯಾಗಿದೆ. ಮಂಗಳವಾರದಂದು ಅಣ್ಣಾ ಮುಖ್ಯ ರಸ್ತೆಯಲ್ಲಿರುವ ಬೇಕರಿಯೊಂದರಲ್ಲಿ ಕಳ್ಳತನವಾಗಿತ್ತು. 20 ಸಾವಿರ ರೂ. ನಗದು ಹಾಗೂ 3 ಸಾವಿರ ರೂ. ಬೆಲೆಯ ಬೇಕರಿ ಐಟಂಗಳನ್ನು ಕಳ್ಳ ಹೊತ್ತೊಯ್ದಿದ್ದ.

ಸನಿಹದ ಅಂಗಡಿ ಹೊರಗೆ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ನಿಧಾನವಾಗಿ ಚಲಿಸುತ್ತಿದ್ದ ಆಟೋವೊಂದು ಸ್ವಲ್ಪ ಸಮಯದ ನಂತರ ವಾಪಾಸ್ ಬಂದು ನಿಲ್ಲಿಸಿರುವ ದೃಶ್ಯ ಸೆರೆಯಾಗಿತ್ತು. ಆಟೋದ ರಿಜಿಸ್ಟ್ರೇಶನ್ ನಂಬರ್ ಸ್ಪಷ್ಟವಾಗಿ ನಮೂದಾಗಿದ್ದ ಕಾರಣ ಚಾಲಕ ಅಣ್ಣಾಮಲೈನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ ವೇಳೆ ಅಚ್ಚರಿದಾಯಕ ವಿಷಯ ತಿಳಿದುಬಂದಿದೆ. ಹಗಲು ಹೊತ್ತಿನಲ್ಲಿ ಆಟೋ ಚಲಾಯಿಸುತ್ತಿದ್ದ ಅಣ್ಣಾಮಲೈ, ರಾತ್ರಿ ತಾನು ಕಳ್ಳತನ ಮಾಡಬೇಕಿದ್ದ ಅಂಗಡಿಗಳನ್ನು ಗುರುತಿಸಿಕೊಳ್ಳುತ್ತಿದ್ದ. ರಾತ್ರಿ ತನ್ನ ಕಳ್ಳತನ ಕೃತ್ಯವೆಸಗುತ್ತಿದ್ದನೆನ್ನಲಾಗಿದೆ. ಈತ ಹಲವು ಕಡೆ ಕಳ್ಳತನ ಮಾಡಿರುವ ವಿಚಾರವೂ ವಿಚಾರಣೆಯಲ್ಲಿ ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...