alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿಗೆ ಮತ್ತು ಬರುವ ಪಾನೀಯ ಕುಡಿಸಿ ಪಾಪದ ಕೃತ್ಯ

rape 789

ಹೆಣ್ಣು ಮಕ್ಕಳು ಎಷ್ಟು ಹುಷಾರಾಗಿದ್ದರೂ ಕಡಿಮೆಯೇ. ಯಾರನ್ನೂ ನಂಬುವಂತಿಲ್ಲ. ಇದಕ್ಕೊಂದು ನಿದರ್ಶನ ಎನ್ನಬಹುದಾದ ಘಟನೆ ನಡೆದಿದೆ ನೋಡಿ, ಪರಿಚಯಸ್ಥನೊಬ್ಬನಿಂದಲೇ ಬಾಲಕಿ ದೌರ್ಜನ್ಯಕ್ಕೆ ಒಳಗಾದ ಘಟನೆ ಮೀರತ್ ಜಿಲ್ಲೆಯಲ್ಲಿ ನಡೆದಿದೆ.

ಮೀರತ್ ಜಿಲ್ಲೆಯ ಲಿಹಸಾರಿ ಬಳಿ ಪಕ್ಕದ ಮನೆಯ ಬಾಲಕಿ ಮನೆಗೆ ಬಂದಿದ್ದ ಸಂದರ್ಭದಲ್ಲಿ ಆಕೆಗೆ ಮತ್ತು ಬರುವ ಟೀ ಕುಡಿಸಿದ ದುರುಳನೊಬ್ಬ ಅತ್ಯಾಚಾರ ಎಸಗಿದ್ದಾನೆ. 16 ವರ್ಷ ವಯಸ್ಸಿನ ಬಾಲಕಿ ಮಾತನಾಡುತ್ತಾ ಪಕ್ಕದ ಮನೆಗೆ ಹೋಗಿದ್ದು, ಆಕೆಯೊಂದಿಗೆ ಮಾತನಾಡುತ್ತಿದ್ದ ಯುವಕ, ಮನೆಯಲ್ಲಿ ಟೀ ಮಾಡುವುದಾಗಿ ಹೇಳಿದ್ದಾನೆ. ಅದರಂತೆ ಟೀ ಕುಡಿಯಲು ಕೊಟ್ಟಿದ್ದು, ಅದರಲ್ಲಿ ಮತ್ತು ಬರುವ ವಸ್ತು ಮಿಕ್ಸ್ ಮಾಡಿದ್ದಾನೆ. ಇದನ್ನು ಅರಿಯದ ಬಾಲಕಿ ಟೀ ಕುಡಿದು ಪ್ರಜ್ಞೆ ತಪ್ಪಿದ್ದಾಳೆ.

ಆಕೆ ಪ್ರಜ್ಞೆ ತಪ್ಪಿದ ಸಂದರ್ಭದಲ್ಲಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಬಾಲಕಿಯ ಪೋಷಕರಿಗೆ ಯುವಕನ ಕಡೆಯವರು ದೂರು ನೀಡದಂತೆ ಒತ್ತಡ ಹೇರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...