alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲಿ ಹೋರಾಟಗಾರರಿಂದ ಲೈಂಗಿಕ ದೌರ್ಜನ್ಯ

haryana-jat-protests

ಜಾಟ್ ಸಮುದಾಯದವರು ಮೀಸಲಾತಿಗಾಗಿ ಹೋರಾಟ ನಡೆಸಿದ್ದ ಸಂದರ್ಭದಲ್ಲಿ ಹರಿಯಾಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಪರಿಸ್ಥಿತಿಯನ್ನು ಹೇಗೆಲ್ಲಾ ದುರುಪಯೋಗಪಡಿಸಿಕೊಂಡಿದ್ದಾರೆ ನೋಡಿ.

ಸೋನಿಪಟ್ ನಲ್ಲಿ ಅಂದಿನ ಘಟನೆಯ ಬಗ್ಗೆ ಮಾಹಿತಿ ನೀಡಿರುವ ಟ್ರಕ್ ಚಾಲಕರಾದ ಸುಖ್ವಿಂದರ್ ಸಿಂಗ್, ನಿರಂಜನ್, ನರೇಶ್ ಕುಮಾರ್ ಅವರು, ಮಾರ್ಥಲ್ ಸಮೀಪದ ಹಸ್ಸಾನ್ ಪುರ್ ಎಂಬಲ್ಲಿ ಹೋರಾಟ ನಡೆಸುತ್ತಿದ್ದ ಕೆಲವರು ತಮ್ಮ ಟ್ರಕ್ ಗಳಿಗೆ ಬೆಂಕಿ ಹಚ್ಚಿದರು. ಸಾಲುಗಟ್ಟಿ ನಿಂತಿದ್ದ ವಾಹನಗಳಲ್ಲಿ ಇದ್ದ ಮಹಿಳೆಯರನ್ನು ಹೊರಗೆ ಎಳೆದುಕೊಂಡರು. ಅಲ್ಲದೇ, ಅವರ ಮೈಮೇಲಿದ್ದ ಬಟ್ಟೆಗಳನ್ನು ಹರಿದು ಲೈಂಗಿಕ ದೌರ್ಜನ್ಯ ನಡೆಸಿದರು. ಇದನ್ನು ನಾವು ಕಂಡಿದ್ದೇವೆ ಎಂದು ಹೇಳಿದ್ದಾರೆ.

ಪ್ರತಿಭಟನೆ ಸಂದರ್ಭದಲ್ಲಿ ಕೆಲವರು ಹೀಗೆ ಅನಾಗರಿಕರಂತೆ ವರ್ತಿಸಿರುವುದು ಗೊತ್ತಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ತನಿಖೆ ಕೈಗೊಂಡಿದೆ. ಹಸ್ಸಾನ್ ಪುರ್ ಗೆ ತೆರಳಿ ವಿಚಾರಿಸಿದಾಗ ಈ ಬಗ್ಗೆ ಯಾರೂ ಮಾಹಿತಿ ನೀಡಿಲ್ಲ ಎನ್ನಲಾಗಿದ್ದು, ಆದರೆ, ಸೋನಿಪಟ್ ನಲ್ಲಿ ಅಂದಿನ ಘಟನೆಯ ಬಗ್ಗೆ ಮೂವರು ಟ್ರಕ್ ಚಾಲಕರು ಮಾಹಿತಿ ನೀಡಿರುವುದರಿಂದ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...