alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡ್ತಿದ್ದ ಪತಿ, ಪತ್ನಿಗೆ ಕೊಟ್ಟ ಉಡುಗೊರೆ ಏನು ಗೊತ್ತಾ?

Default

ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ. ಈ ಸುದ್ದಿ ಕಡಿಮೆಯಾಗುವ ಲಕ್ಷಣವೇ ಕಾಣ್ತಾ ಇಲ್ಲ. ಜಗತ್ತು ಎಷ್ಟೇ ಮುಂದುವರೆದಿದ್ದರೂ ವರದಕ್ಷಿಣೆ ಪಿಡುಗು ಮಾತ್ರ ನಿಂತಿಲ್ಲ. ವರದಕ್ಷಿಣೆ ಆಸೆಗೆ ಅಮೃತ್ ಸರದಲ್ಲಿ ಮಹಿಳೆಯೊಬ್ಬಳನ್ನು ಜೀವಂತವಾಗಿ ಸುಡಲಾಗಿದೆ.

ಘಟನೆ ಅಮೃತ್ ಸರದ ನಾಗಕಲಂ ಗ್ರಾಮದಲ್ಲಿ ನಡೆದಿದೆ. ಸೋಮವಾರ ಕುಟುಂಬಸ್ಥರು ನವವಿವಾಹಿತೆ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಹರ್ಪ್ರೀತ್ ಕೌರ್ ಎಂಬಾಕೆಯ ಮದುವೆ ರವಿ ಎಂಬಾತನ ಜೊತೆ ಕೆಲ ತಿಂಗಳ ಹಿಂದಷ್ಟೇ ನಡೆದಿತ್ತು. ರವಿ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡ್ತಿದ್ದ. ಮದುವೆ ನಂತ್ರ ಆತ ವರದಕ್ಷಿಣೆಗಾಗಿ ಪೀಡಿಸ್ತಾ ಇದ್ದ ಎನ್ನಲಾಗಿದೆ.

ಸಾವನ್ನಪ್ಪುವ ಮುನ್ನ ಪೊಲೀಸರಿಗೆ ಹರ್ಪ್ರೀತ್ ಕೌರ್ ಈ ವಿಷಯ ತಿಳಿಸಿದ್ದಾಳೆ. ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ. ಆದ್ರೆ ಆರೋಪಿಗಳು ಪರಾರಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...