alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಸಂಬಳ ಕೇಳಿದ ಬಾಲಕಿಯ ಬರ್ಬರ ಹತ್ಯೆ

ಉತ್ತಮ ವೇತನದ ಉದ್ಯೋಗದ ಆಮಿಷವೊಡ್ಡಿ 16 ವರ್ಷದ ಬಾಲಕಿಯನ್ನು ಜಾರ್ಖಂಡ್ ನಿಂದ ದೆಹಲಿಗೆ ಕರೆ ತಂದಿದ್ದ ತಂಡವೊಂದು ಆಕೆ ತನ್ನ ಸಂಬಳ ಕೇಳಿದಳೆಂಬ ಕಾರಣಕ್ಕೆ ಹತ್ಯೆ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಚರಂಡಿಯಲ್ಲಿ ಎಸೆದಿದ್ದ ಆಘಾತಕಾರಿ ಘಟನೆ ನಡೆದಿದ್ದು, ಇದೀಗ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಜೀತ್ ಎಂಬಾತ ಈ ಬಾಲಕಿಯನ್ನು ಮೂರು ವರ್ಷಗಳ ಹಿಂದೆ ಕರೆದುಕೊಂಡು ಬಂದಿದ್ದು, ಮನೆಯೊಂದರಲ್ಲಿ ಮನೆಗೆಲಸಕ್ಕೆ ನೇಮಿಸಿದ್ದ. ಮನೆ ಮಾಲೀಕರಿಂದ ಬಾಲಕಿಯ ಸಂಬಳ ಪಡೆದುಕೊಳ್ಳುತ್ತಿದ್ದ ಮಂಜೀತ್, ಕಳೆದ ಒಂದು ವರ್ಷದಿಂದ ಆಕೆಗೆ ಸಂಬಳ ನೀಡಿರಲಿಲ್ಲವೆನ್ನಲಾಗಿದೆ.

ಮೇ 3 ರಂದು ಮಂಜೀತ್ ನಿವಾಸಕ್ಕೆ ಭೇಟಿ ನೀಡಿದ ಬಾಲಕಿ ಸಂಬಳಕ್ಕಾಗಿ ಆಗ್ರಹಿಸಿದ ವೇಳೆ ಮಂಜೀತ್, ತನ್ನ ಸಹವರ್ತಿ ಮಹಿಳೆ ಸೇರಿದಂತೆ ಮತ್ತಿಬ್ಬರ ಸಹಕಾರದೊಂದಿಗೆ ಆಕೆಯ ಹತ್ಯೆ ಮಾಡಿದ್ದಾನೆ. ಬಳಿಕ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮಿಯಾನ್ವಾಲಿ ನಗರದ ಚರಂಡಿಯಲ್ಲಿ ಎಸೆದಿದ್ದರು. ಬಾಲಕಿಯ ಮೃತದೇಹ ಮೇ 4 ರಂದು ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸಿದ್ದರಲ್ಲದೇ ಸನಿಹದ ವಾಸಿಗಳ ಮೇಲೆ ನಿಗಾ ಇಟ್ಟ ವೇಳೆ ಮಂಜೀತ್, ಬಾಲಕಿಯ ಮೃತದೇಹ ಪತ್ತೆಯಾದ ದಿನದಿಂದ ತಲೆಮರೆಸಿಕೊಂಡಿರುವುದು ತಿಳಿದುಬಂದಿತ್ತು.

ಮೇ 17 ರಂದು ಮಂಜೀತ್ ನನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದ ವೇಳೆ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆತನನ್ನು ಬಂಧಿಸಿರುವ ಪೊಲೀಸರು ಹತ್ಯೆಯಲ್ಲಿ ಪಾಲ್ಗೊಂಡಿದ್ದ ಮೂವರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...