alex Certify
ಕನ್ನಡ ದುನಿಯಾ       Mobile App
       

Kannada Duniya

ಆತ 14 ಸಾರಾಯಿ ಬಾಟಲ್ ಎಲ್ಲಿಟ್ಟಿದ್ದ ಗೊತ್ತಾ?

wine1

ಇಸ್ಲಾಂ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ದೇಶ ಸೌದಿ ಅರೇಬಿಯಾ. ಅಲ್ಲಿ ಆಲ್ಕೋಹಾಲ್ ಸೇವಿಸುವಂತಿಲ್ಲ. ಆದ್ರೆ ಇಂತ ದೇಶದಲ್ಲೂ ಅಕ್ರಮ ಸಾರಾಯಿ ಸಾಗಾಟ ನಡೆಯುತ್ತಿದೆ. ವ್ಯಕ್ತಿಯೊಬ್ಬ ಸಾರಾಯಿ ಬಾಟಲಿಗಳನ್ನು ಸಾಗಿಸುವಾಗ ಸಿಕ್ಕಿ ಬಿದ್ದಿದ್ದಾನೆ. ಆತನ ವೇಷ ನೋಡಿ ಪೊಲೀಸರೇ ದಂಗಾಗಿದ್ದಾರೆ.

ಅಕ್ರಮ ಸಾಗಾಟ ಮಾಡುವವರಿಗೆ ವಸ್ತುಗಳನ್ನು ಎಲ್ಲಿ ಅಡಗಿಸಿಡಬೇಕೆಂಬುದನ್ನು ಹೊಸದಾಗಿ ಹೇಳಿಕೊಡಬೇಕಾಗಿಲ್ಲ. ಬಂಗಾರದ ತುಂಡುಗಳನ್ನೇ ಸಲೀಸಾಗಿ ಸಾಗಿಸುವವರು ನಮ್ಮ ದೇಶದಲ್ಲಿದ್ದಾರೆ. ಹಾಗೆ ಅಲ್ಲಿ ಸಿಕ್ಕಿಬಿದ್ದ ವ್ಯಕ್ತಿ ತನ್ನ ಸೊಂಟದ ಕೆಳಗೆ ಸಾರಾಯಿ ಬಾಟಲುಗಳನ್ನು ಕಟ್ಟಿಕೊಂಡು ಸಾಗಿಸುತ್ತಿದ್ದ.

ಚೆಕ್ಕಿಂಗ್ ವೇಳೆ ಆತ ಆತಂಕಗೊಂಡಿದ್ದಾನೆ. ಅನುಮಾನ ಬಂದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಆತನ ಪ್ಯಾಂಟ್ ಬಿಚ್ಚಿದ್ದಾರೆ. ಆಗ 14ಕ್ಕೂ ಹೆಚ್ಚು ಬಾಟಲಿಗಳು ಸಿಕ್ಕಿವೆ. ಈ ಹಿಂದೆ ಕೂಡ ಆತ ಸ್ಥಳೀಯರಿಗೆ ಆಲ್ಕೋಹಾಲ್ ಒದಗಿಸಿದ್ದನಂತೆ. ಸೌದಿ ಅರೇಬಿಯಾದಲ್ಲಿ ಅಕ್ರಮ ಸಾರಾಯಿ ಮಾರಾಟಗಾರರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...