alex Certify
ಕನ್ನಡ ದುನಿಯಾ       Mobile App
       

Kannada Duniya

ಖರೀದಿಗೆ ಹಣವಿಲ್ಲದೇ ದಿನಸಿ ದೋಚಿದ ಜನ

ration-shop

ಭೋಪಾಲ್: ದೇಶದಲ್ಲಿ 1000 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವುದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ.

ಕೈಯಲ್ಲಿರುವ ನೋಟುಗಳಿಗೆ ಬೆಲೆ ಇಲ್ಲದೇ, ಅಗತ್ಯ ವಸ್ತು ಖರೀದಿಗೆ ತೊಂದರೆಯಾಗಿದೆ. ಚಿಲ್ಲರೆ ಸಮಸ್ಯೆ ಎದುರಾಗಿದೆ. ಎ.ಟಿ.ಎಂ. ಕೂಡ ಕೆಲಸ ಮಾಡುತ್ತಿಲ್ಲ. ಹೀಗೆ ಖರೀದಿಗೆ ಹಣವಿಲ್ಲದ ಕಾರಣ, ಜನ, ದಿನಸಿ ಅಂಗಡಿಯನ್ನು ಲೂಟಿ ಮಾಡಿ ಕೈಗೆ ಸಿಕ್ಕ ಧವಸ, ಧಾನ್ಯಗಳನ್ನು ದೋಚಿದ ಘಟನೆ ಮಧ್ಯಪ್ರದೇಶದ ಛತ್ತರ್ ಪುರ್ ಜಿಲ್ಲೆಯ ಬಾರ್ದುವಾ ಗ್ರಾಮದಲ್ಲಿ ನಡೆದಿದೆ. ನೋಟ್ ಬ್ಯಾನ್ ಮಾಡಿರುವುದರಿಂದ ಅಂಗಡಿಯವರು ಇವುಗಳನ್ನು ಪಡೆಯಲು ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ಜನರಿಗೆ ಅಂಗಡಿಗಳಲ್ಲಿ ದಿನಸಿ ಸಿಗುತ್ತಿಲ್ಲ.

ಕೈಯಲ್ಲಿದ್ದ ಸಣ್ಣ ನೋಟುಗಳು ಕೂಡ ಖಾಲಿಯಾಗಿದ್ದರಿಂದ ಜನ ಆಕ್ರೋಶದಿಂದ ದಿನಸಿ ಅಂಗಡಿಗೆ ನುಗ್ಗಿ ಲೂಟಿ ಮಾಡಿದ್ದಾರೆ. ಇದೆಲ್ಲಾ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಂಗಡಿ ಮಾಲೀಕ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...