alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಎದುರು ಪ್ಯಾಂಟ್ ಜಿಪ್ ಬಿಚ್ಚಿದ ಡೆಲಿವರಿ ಬಾಯ್

cr-ben-oct-13

ಬೆಂಗಳೂರು: ವಿದೇಶಿ ಮಹಿಳೆ ಎದುರು, ಡೆಲಿವರಿ ಬಾಯ್ ಅನುಚಿತ ವರ್ತನೆ ತೋರಿದ ಘಟನೆ, ಬೆಂಗಳೂರಿನ ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಪಾರ್ಟ್ ಮೆಂಟ್ ಒಂದರಲ್ಲಿ 23 ವರ್ಷದ ಇರಾನಿ ಮಹಿಳೆ ವಾಸವಾಗಿದ್ದು, ಆಕೆ ಕೂವ್ಸ್.ಕಾಂನಲ್ಲಿ ಶೂ ಬುಕ್ ಮಾಡಿದ್ದಾಳೆ. ಶೂ ಡೆಲಿವರಿ ಕೊಡಲು ಬಂದಿದ್ದ ಅಬು ಸಲ್ಮಾನ್ ಎಂಬಾತ ಮಹಿಳೆ ಎದುರು, ಪ್ಯಾಂಟ್ ಜಿಪ್ ಬಿಚ್ಚಿ ಅನುಚಿತವಾಗಿ ವರ್ತಿಸಿದ್ದಲ್ಲದೇ, ದೌರ್ಜನ್ಯ ನಡೆಸಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಮಹಿಳೆ ಕಿರುಚಾಡಿದ್ದಾಳೆ.

ಆಗ ಅಬು ಸಲ್ಮಾನ್ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದು, ಅಕ್ಕಪಕ್ಕದ ನಿವಾಸಿಗಳು ಆತನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಸಲ್ಮಾನ್ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...