alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರ ಬಲೆಗೆ ಬಿದ್ದಿದ್ದಾನೆ ದೆಹಲಿ ‘ಸ್ಪೈಡರ್ ಮ್ಯಾನ್’

ದೆಹಲಿಯಲ್ಲಿ ಸ್ಪೈಡರ್ ಮ್ಯಾನ್ ಅಂತಾನೇ ಫೇಮಸ್ ಆಗಿದ್ದ ಚಾಲಾಕಿ ಕಳ್ಳ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಗೋಡೆ ಹತ್ತುವುದರಲ್ಲಿ ಈತ ನಿಪುಣನಾಗಿದ್ದ. ದೆಹಲಿಯಲ್ಲಿ ಸುಮಾರು 50 ಲಕ್ಷ ಮೌಲ್ಯದ ವಸ್ತುಗಳನ್ನು ಈತ ದೋಚಿದ್ದಾನೆ.

19 ಬೆಲೆಬಾಳುವ ವಾಚ್ ಗಳು, ಸ್ಮಾರ್ಟ್ ಫೋನ್, 30ಕ್ಕೂ ಹೆಚ್ಚು ವಜ್ರ ಮತ್ತು ಚಿನ್ನಾಭರಣಗಳು, ಲೈಸನ್ಸ್ ಹೊಂದಿದ್ದ ರಿವಾಲ್ವರ್ ಎಲ್ಲವನ್ನೂ ಇವನ ಬಳಿಯಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

24 ವರ್ಷದ ಜೈಪ್ರಕಾಶ್ ದೆಹಲಿಯ ಜಹಾಂಗಿರ್ಪುರಿ ನಿವಾಸಿ. ಸರಸ್ವತಿ ವಿಹಾರ್ ನಲ್ಲಿದ್ದ ಮನೆಯೊಂದರ ಗೋಡೆ ಹತ್ತುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನ ಸಹಚರರಾದ ರವಿ ಕುಮಾರ್, ಸಂಜಯ್ ಗೋಯಲ್ ಮತ್ತು ಪ್ರಮೋದ್ ಕುಮಾರ್ ಶಾನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಇವರು ಸುಮಾರು 53 ಕಡೆ ದರೋಡೆ ಮಾಡಿದ್ದರು.

ಪ್ರತಿಷ್ಠಿತ ಬಡಾವಣೆಗಳನ್ನೇ ನೋಡಿ ಜೈಪ್ರಕಾಶ್ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದ. ಸಮೀಪದ ಪಾರ್ಕ್ ಒಂದರಲ್ಲಿ ಆಶ್ರಯ ಪಡೆಯುತ್ತಿದ್ದ. ಜೊತೆಗೆ ಕಪ್ಪು ಬಣ್ಣದ ಟಿ ಶರ್ಟ್ ಹಾಗೂ ಪ್ಯಾಂಟ್ ತರುತ್ತಿದ್ದ. ಪಾರ್ಕ್ ನಲ್ಲೇ ಡ್ರೆಸ್ ಚೇಂಜ್ ಮಾಡಿಕೊಂಡು, ಶೂ ಕಳಚಿಟ್ಟು ಮನೆಯ ಗೋಡೆ ಏರಿ, ಕಳವು ಮಾಡುತ್ತಿದ್ದ. ಹತ್ತಾರು ಮಹಡಿಯ ಮನೆಗಳನ್ನು ಕೂಡ ಕೆಲವೇ ಕ್ಷಣಗಳಲ್ಲಿ ಏರಬಲ್ಲ ಈ ಚಾಲಾಕಿ ಕಳ್ಳನನ್ನು ಎಲ್ರೂ ಸ್ಪೈಡರ್ ಮ್ಯಾನ್ ಅಂತಾನೇ ಕರೆಯುತ್ತಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...