alex Certify
ಕನ್ನಡ ದುನಿಯಾ       Mobile App
       

Kannada Duniya

ಹತ್ಯೆಗೆ ಕಾರಣವಾಯ್ತು ‘ಪ್ರೇಮ ಪ್ರಕರಣ’

ದೆಹಲಿಯ ಖ್ಯಾಲಾ ಪ್ರದೇಶದಲ್ಲಿ ಗುರುವಾರ ರಾತ್ರಿ ಯುವಕನೊಬ್ಬನನ್ನು ಸಾರ್ವಜನಿಕ ಸ್ಥಳದಲ್ಲಿ ಚಾಕು ಇರಿದು ಕೊಲೆ ಮಾಡಲಾಗಿದೆ. ನಾಲ್ವರು ದರೋಡೆಕೋರರು ಯುವಕನನ್ನು ಸುತ್ತುವರೆದು ಚಾಕು ಇರಿದಿದ್ದಾರೆ. ಕೊಲೆಗೆ ಪ್ರೇಮ ಪ್ರಕರಣ ಕಾರಣ ಎನ್ನಲಾಗ್ತಿದೆ.

ಮೃತ ಯುವಕನ ಪ್ರೇಯಸಿ ಕೊಲೆಗೆ ತನ್ನ ಕುಟುಂಬಸ್ಥರೇ ಕಾರಣ ಎಂದಿದ್ದಾಳೆ. ತನಗೂ ಪ್ರಾಣ ಬೆದರಿಕೆಯಿದ್ದು, ರಕ್ಷಣೆ ನೀಡುವಂತೆ ಪೊಲೀಸರಿಗೆ ಹುಡುಗಿ ದೂರು ನೀಡಿದ್ದಾಳೆ. ರಘುವೀರ್ ನಗರದ ಆರ್.ಜಿ. ಫ್ಲಾಟ್ ನಲ್ಲಿ ವಾಸವಾಗಿರುವ ಅಂಕಿತ್ ಹುಡುಗಿಯೊಬ್ಬಳನ್ನು ಪ್ರೀತಿ ಮಾಡ್ತಿದ್ದ. ಹುಡುಗಿ ಕೂಡ ಆತನ ಪ್ರೀತಿಯನ್ನು ಒಪ್ಪಿದ್ದಳು ಎನ್ನಲಾಗಿದೆ.

ಹುಡುಗಿ ಮನೆಯವರಿಂದ ಮದುವೆಗೆ ವಿರೋಧ ವ್ಯಕ್ತವಾಗ್ತಾಯಿತ್ತು. ಇಬ್ಬರೂ ಓಡಿ ಹೋಗಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ. ಆದ್ರೆ ಅಷ್ಟರಲ್ಲೇ ಅಂಕಿತ್ ಕೊಲೆ ಮಾಡಲಾಗಿದೆ. ಹತ್ಯೆಗೈದ ವ್ಯಕ್ತಿಯೊಬ್ಬ ಪೊಲೀಸ್ ಕೈಗೆ ಸಿಕ್ಕಿದ್ದು ವಿಚಾರಣೆ ನಡೆಯುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...