alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲಿವುಡ್ ಸಿನೆಮಾ ನೋಡಿ ಮಾಡಿದ್ದು ಖತರ್ನಾಕ್ ಕೆಲಸ

‘ಗಾನ್ ಇನ್ ಸಿಕ್ಸ್ಟಿ ಸೆಕೆಂಡ್ಸ್’ ಅನ್ನೋ ಹಾಲಿವುಡ್ ಸಿನೆಮಾ ನೋಡಿ ದೆಹಲಿಯಲ್ಲಿ ಇಬ್ಬರು ಭಾರೀ ಕಳ್ಳತನ ಮಾಡಿದ್ದಾರೆ. 22 ಮೋಟಾರ್ ಸೈಕಲ್ ಗಳನ್ನು ಕದ್ದು, ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. 25 ವರ್ಷದ ಮನ್ಮೀತ್ ಹಾಗೂ 18 ವರ್ಷದ ಸುಮಿತ್ ಬಂಧಿತರು.

ಮೊದಲಿನಿಂದ್ಲೂ ಇಬ್ಬರೂ ಇದೇ ದಂಧೆ ಮಾಡುತ್ತಿದ್ದರು. ನವೆಂಬರ್ ನಲ್ಲಿ ಜೈಲಿನಿಂದ ಬಿಡುಗಡೆಯಾದ ಮೇಲೂ ಅದೇ ಕಾಯಕ ಮುಂದುವರಿಸಿದ್ದರು. ಮನ್ಮೀತ್ ಹಾಗೂ ಸುಮಿತ್ ಗೆ ಸಿನೆಮಾ ಹುಚ್ಚಿತ್ತು. ಕಳ್ಳತನ, ಕ್ರೈಮ್ ಕುರಿತಾದ ಹಾಲಿವುಡ್ ಚಿತ್ರಗಳನ್ನೇ ನೋಡುತ್ತಿದ್ರು.

ಅದೇ ರೀತಿ ಕಳವು ಮಾಡಲು ಸ್ಕೆಚ್ ಹಾಕುತ್ತಿದ್ರು. ಗಾನ್ ಇನ್ 60 ಸೆಕೆಂಡ್ಸ್ ಚಿತ್ರ ನೋಡಿ 50-60 ಮೋಟಾರ್ ಸೈಕಲ್ ಗಳನ್ನು ಕದ್ದು ಮಾರಲು ಪ್ಲಾನ್ ರೆಡಿ ಮಾಡಿಕೊಂಡಿದ್ದರು. ಕೆಲದಿನಗಳ ಹಿಂದಷ್ಟೆ ಜೈಲಿನಿಂದ ಬಿಡುಗಡೆಯಾಗಿದ್ದ ಖದೀಮರ ಮೇಲೆ ಪೊಲೀಸರು ಕೂಡ ಕಣ್ಣಿಟ್ಟಿದ್ದರು.

ಇಬ್ಬರೂ ಆರಾಮಾಗಿ ಬೈಕ್ ಸವಾರಿ ಮಾಡ್ತಿರೋದು ಪೊಲೀಸರ ಕಣ್ಣಿಗೆ ಬಿದ್ದಿದೆ. ಅಷ್ಟರಲ್ಲಾಗ್ಲೇ ಹಲವರು ಬೈಕ್ ಕಳವಾಗಿರೋ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಅನುಮಾನ ಬಂದ ಪೊಲೀಸರು ಇಬ್ಬರನ್ನೂ ಹಿಡಿದು ವಿಚಾರಣೆ ಮಾಡಿದಾಗ 22 ಬೈಕ್ ಕದ್ದಿರೋದಾಗಿ ಬಾಯ್ಬಿಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...