alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳತನ ಮಾಡಲು ಬಂದವನನ್ನು ಹೊಡೆದು ಕೊಂದ್ರು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಕಳ್ಳತನ ಮಾಡಿ ಸಿಕ್ಕಿಬಿದ್ದ ಹುಡುಗನನ್ನು ಹೊಡೆದು ಕೊಲೆ ಮಾಡಲಾಗಿದೆ. ಘಟನೆ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಹುಡುಗ ಬಿಹಾರದ ನಿವಾಸಿಯಂತೆ. ವಾರದ ಹಿಂದಷ್ಟೇ ಅಜ್ಜನ ಜೊತೆ ದೆಹಲಿಗೆ ಬಂದಿದ್ದ ಎನ್ನಲಾಗಿದೆ. ದೆಹಲಿಯಲ್ಲಿಯೇ ಶಿಕ್ಷಣ ಪಡೆಯುವ ಉದ್ದೇಶ ಆತನದ್ದಾಗಿತ್ತು ಎನ್ನಲಾಗಿದೆ. ಮಂಗಳವಾರ ಮನೆಯೊಂದಕ್ಕೆ ನುಗ್ಗಿ ಪರ್ಸ್ ಕದ್ದಿದ್ದಾನಂತೆ. ಇದನ್ನು ನೋಡಿದ ಮಹಿಳೆ ಕೂಗಿಕೊಂಡಿದ್ದಾಳೆ.

ಮಹಿಳೆ ಕೂಗು ಕೇಳಿ ಓಡಿ ಬಂದ ಸ್ಥಳೀಯರು ಹುಡುಗನಿಗೆ ಹೊಡೆಯಲು ಶುರು ಮಾಡಿದ್ದಾರೆ. ಮನಸ್ಸಿಗೆ ಬಂದಂತೆ ಹೊಡೆದಿದ್ದಾರೆ. ಹುಡುಗ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ನಂತ್ರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...