alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್….18 ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರ

ರಾಜಧಾನಿ ದೆಹಲಿಯಲ್ಲಿ ಘನಘೋರ ಕೃತ್ಯವೊಂದು ನಡೆದಿದೆ. ಕಾಮಾಂಧನೊಬ್ಬ 18 ತಿಂಗಳ ಪುಟ್ಟ ಮಗುವಿನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಸೋಮವಾರ ಈ ಕೃತ್ಯ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಗುವಿನ ತಂದೆ ಖಾಸಗಿ ಸೆಕ್ಯೂರಿಟಿ ಕಂಪನಿಯಲ್ಲಿ ಕೆಲಸ ಮಾಡ್ತಾನೆ. ಆರೋಪಿ ಕೂಡ ಅಲ್ಲೇ ಕೆಲಸ ಮಾಡುತ್ತಿದ್ದ, ಮಗುವಿನ ತಂದೆಯ ಸ್ನೇಹಿತನಾಗಿದ್ದ. ಹೆಣ್ಣು ಮಗುವಿನ ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ರು. ಆ ಯುವಕ ತಾನು ಮಗುವನ್ನು ನೋಡಿಕೊಳ್ಳುವುದಾಗಿ ಹೇಳಿದ್ದ. ಹೆತ್ತವರು ಮರೆಯಾಗುತ್ತಿದ್ದಂತೆ ಮಗುವಿನ ಮೇಲೆರಗಿದ್ದಾನೆ.

ಸಂಜೆ ಕೆಲಸ ಮುಗಿಸಿಕೊಂಡು ವಾಪಸ್ ಬಂದ ತಾಯಿಗೆ ಆಘಾತ ಕಾದಿತ್ತು. ರಕ್ತದ ಮಡುವಿನಲ್ಲಿ ಮಲಗಿದ್ದ ಮಗು ಒಂದೇ ಸಮನೆ ಅಳುತ್ತಿತ್ತು. ಕೂಡಲೇ ಹತ್ತಿರದ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಲಾಯ್ತು. ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಅಂತಾ ವೈದ್ಯರು ತಿಳಿಸಿದ್ದಾರೆ.

ಈ ನೀಚ ಕೃತ್ಯ ಎಸಗಿದ ಕಾಮುಕ ಇನ್ನೂ 21 ವರ್ಷದ ಯುವಕ. ಆತನಿಗೆ ಮದುವೆ ಕೂಡ ಆಗಿಲ್ಲ. ಏನೂ ಅರಿಯದ ಮುಗ್ಧ ಕಂದಮ್ಮನ ಮೇಲೆ ದೌರ್ಜನ್ಯ ಎಸಗಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...