alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆ ಬಸ್ ನಲ್ಲಿ ಬಾಲಕನ ಪ್ಯಾಂಟ್ ಜಿಪ್ ಬಿಚ್ಚಿ ಹಿಂಸೆ ನೀಡ್ತಿದ್ರು ಸೀನಿಯರ್ಸ್

ದೇಶದಲ್ಲಿ ಹೆಣ್ಣು ಮಕ್ಕಳೊಂದೇ ಅಲ್ಲ ಗಂಡು ಮಕ್ಕಳು ಕೂಡ ಸುರಕ್ಷಿತವಲ್ಲ. ಬಾಲಕರ ಮೇಲೂ ಲೈಂಗಿಕ ಕಿರುಕುಳ ನಡೆಯುತ್ತಿದೆ. ಇದಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಮತ್ತೊಮ್ಮೆ ಸಾಕ್ಷಿಯಾಗಿದೆ. ಪೂರ್ವ ದೆಹಲಿಯ ವಿವೇಕ ವಿಹಾರ ಕಾಲೋನಿಯ ಖಾಸಗಿ ಶಾಲೆಯೊಂದರ 9 ವರ್ಷದ ಬಾಲಕನ ಮೇಲೆ ಲೈಂಗಿಕ ಕಿರುಕುಳ ನಡೆದಿದೆ.

ಖಾಸಗಿ ಶಾಲೆ ಬಸ್ ನಲ್ಲಿ ಬಾಲಕನಿಗೆ ಹಿರಿಯ ವಿದ್ಯಾರ್ಥಿಗಳು ಕಿರುಕುಳ ನೀಡ್ತಿದ್ದರಂತೆ. ಈ ಸಂಗತಿಯನ್ನು ಬಸ್ ನಲ್ಲಿ ಬರ್ತಿದ್ದ ಶಿಕ್ಷಕಿಗೆ ವಿದ್ಯಾರ್ಥಿ ಹೇಳಿದ್ದನಂತೆ. ಸುಂದರವಾಗಿರುವ ಕಾರಣ, ನಿನ್ನ ಜೊತೆ ತಮಾಷೆ ಮಾಡ್ತಾರೆಂದು ಶಿಕ್ಷಕಿ ವಿಷ್ಯ ಬದಲಾವಣೆ ಮಾಡಿದ್ದಳಂತೆ.

ಮನೆಯಲ್ಲಿ ಸದಾ ಮೌನಿಯಾಗಿರುತ್ತಿದ್ದ ಬಾಲಕನನ್ನು ತಾಯಿ ವಿಚಾರಿಸಿದಾಗ ಸತ್ಯ ಗೊತ್ತಾಗಿದೆ. 7ನೇ, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಬಸ್ ನಲ್ಲಿ ಹಿಂದಿನ ಸೀಟಿಗೆ ಕರೆಯಿಸಿ ಪ್ಯಾಂಟ್ ಜಿಪ್ ಬಿಚ್ಚಿ ಕೆಟ್ಟದಾಗಿ ನಡೆದುಕೊಳ್ತಿದ್ದರಂತೆ. ಪಾಲಕರು, ಶಾಲೆ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಅಲ್ಲಿ ಯಾವುದೇ ಬದಲಾವಣೆ ಕಾಣದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ನಂತ್ರ ಶಿಕ್ಷಕಿ ಹಾಗೂ ಮಕ್ಕಳನ್ನು ಶಾಲೆಯಿಂದ ವಜಾ ಮಾಡಿರುವುದಾಗಿ ಪ್ರಿನ್ಸಿಪಾಲರು ಹೇಳಿಕೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...