alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಶುರುವಾಗಿದೆ ಮದುವೆ ಮನೆಯಲ್ಲಿ ಕಳ್ಳರ ಕೈಚಳಕ

ಮದುವೆ ಸೀಸನ್ ಶುರುವಾಗ್ತಿದ್ದಂತೆ ಕಳ್ಳರ ಗ್ಯಾಂಗ್ ಕೂಡ ಮತ್ತೆ ಚುರುಕಾಗಿದೆ. ಮದುವೆ ಮನೆಯಲ್ಲಿ ಅತಿಥಿಗಳ ಮಧ್ಯೆ ಸೇರಿಕೊಂಡು ಕಳವು ಮಾಡೋದೇ ಇವರ ಕಾಯಕ. ಶನಿವಾರವಷ್ಟೆ ದೆಹಲಿಯ ಜೈ ಸಿಂಗ್ ರಸ್ತೆಯಲ್ಲಿ ಕಳ್ಳತನ ನಡೆದಿದೆ. ವಧುವಿನ ತಾಯಿಯ ಆಭರಣ ಹಾಗೂ ನಗದು ಸೇರಿ 2 ಲಕ್ಷ ಮೌಲ್ಯದ ವಸ್ತುಗಳು ಕಳವಾಗಿವೆ.

ಕಳೆದ ವರ್ಷ ದೆಹಲಿಯಲ್ಲಿ ನಡೆಯುತ್ತಿದ್ದ ಕಳವು ಪ್ರಕರಣಗಳನ್ನೇ ಇದು ಕೂಡ ಹೋಲುತ್ತಿದ್ದು, ಅದೇ ಗ್ಯಾಂಗ್ ಈ ಕೃತ್ಯ ಎಸಗಿದೆ ಅಂತಾ ದೆಹಲಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ವರ್ಷ ಈ ರೀತಿಯ ಕಳವು ನಡೆದಿದೆ.

ಮರಿಯಮ್ಮ ಎಂಬುವವರು ಮಯೂರ್ ವಿಹಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಹಣ ಮತ್ತು ಆಭರಣವಿದ್ದ ಬ್ಯಾಗನ್ನು 10 ವರ್ಷದ ಬಾಲಕನೊಬ್ಬ ಎಗರಿಸಿದ್ದಾನೆ ಅಂತಾ ಅನುಮಾನಿಸಿದ್ದಾರೆ ಮರಿಯಮ್ಮ. ಮರಿಯಮ್ಮ ಅತಿಥಿಗಳೊಂದಿಗೆ ಮಾತನಾಡುತ್ತಿದ್ದ ಸಮಯ ನೋಡಿ ಬ್ಯಾಗ್ ಎಸ್ಕೇಪ್ ಮಾಡಿದ್ದಾನೆ.

ಕಳೆದ ವರ್ಷ ಇಂತಹ ಹಲವು ಕಳವು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಮಧ್ಯಪ್ರದೇಶದ ಮಕ್ಕಳು, ಮಹಿಳೆಯರನ್ನು ಬಳಸಿಕೊಂಡು ದೊಡ್ಡದೊಂದು ಗ್ಯಾಂಗ್ ಕಟ್ಟಲಾಗಿತ್ತು. ಶ್ರೀಮಂತರ ಮನೆಯ ಮದುವೆಗಳಲ್ಲಿ ಕಳ್ಳತನ ಮಾಡೋದೇ ಈ ಗ್ಯಾಂಗ್ ನ ಕೆಲಸ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...