alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೂವರೆ ವರ್ಷದಲ್ಲಿ ಇವರು ಕದ್ದ ಕಾರೆಷ್ಟು ಗೊತ್ತಾ?

ದೆಹಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ದುಬಾರಿ ಕಾರು ಕದಿಯುತ್ತಿದ್ದ ಗ್ಯಾಂಗ್ ನ 11 ಜನರನ್ನು ಬಂಧಿಸಿದ್ದಾರೆ. ಈ ಖದೀಮರು ಮಾಡಿರೋ ಕೆಲಸ ಕೇಳಿದ್ರೆ ಎಂಥವರು ಕೂಡ ಬೆಚ್ಚಿಬೀಳ್ತಾರೆ. ಕೇವಲ ಒಂದೂವರೆ ವರ್ಷದಲ್ಲಿ ಈ ಗ್ಯಾಂಗ್ 500ಕ್ಕೂ ಹೆಚ್ಚು ದುಬಾರಿ ಕಾರುಗಳನ್ನು ಕಳವು ಮಾಡಿದೆ.

ಅವುಗಳಲ್ಲಿ ಸುಮಾರು 30 ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕದ್ದ ಕಾರುಗಳನ್ನು ಹರಿಯಾಣ ಮತ್ತು ಪಂಜಾಬ್ ನಲ್ಲಿ ಮಾರಾಟ ಮಾಡುತ್ತಿದ್ರು. ಸ್ಕ್ರಾಪ್ ಡೀಲರ್ ಗಳಿಂದ ಉಪಯೋಗಕ್ಕೆ ಬಾರದ ಹಳೆಯ ವಾಹನ ಕೊಂಡುಕೊಂಡು ಅದರ ಇನ್ಷೂರೆನ್ಸ್ ಮತ್ತು ಇತರ ದಾಖಲೆ ಬಳಸಿ ಕದ್ದ ಕಾರನ್ನು ಮಾರುತ್ತಿದ್ರು.

ಅದೇ ಬಣ್ಣ ಮತ್ತು ಮಾದರಿಯ ಕಾರನ್ನು ಹುಡುಕಿ ಹುಡುಕಿ ಕಳ್ಳತನ ಮಾಡುತ್ತಿದ್ರು. ದೆಹಲಿಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳಿರೋದ್ರಿಂದ ಅದು ವಾಹನ ಕಳ್ಳರ ಸ್ವರ್ಗವಾಗಿ ಮಾರ್ಪಟ್ಟಿದೆ. ದೆಹಲಿ, ಹರಿಯಾಣ, ಪಂಜಾಬ್, ಗುಜರಾತ್ ರಾಜಸ್ತಾನ ಮತ್ತು ಈಶಾನ್ಯ ರಾಜ್ಯಗಳಲ್ಲೂ ಈ ಗ್ಯಾಂಗ್ ಕೈಚಳಕ ತೋರಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...