alex Certify
ಕನ್ನಡ ದುನಿಯಾ       Mobile App
       

Kannada Duniya

ಹಸುಗೂಸನ್ನು ಬಕೆಟ್ ನಲ್ಲಿ ಮುಳುಗಿಸಿ ಕೊಂದ ತಾಯಿ

ನವದೆಹಲಿ: ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರುತ್ತಾರೆ, ಆದರೆ ಕೆಟ್ಟ ತಾಯಿಯಿರಲ್ಲ ಎಂಬ ಮಾತಿದೆ. ಆದರೆ ಈ ಮಾತು ಇಲ್ಲೊಂದು ಕ್ರೂರ ತಾಯಿಯ ವಿಷಯದಲ್ಲಿ ಸುಳ್ಳಾಗಿದೆ. ಹೌದು, ಕುಟುಂಬದಲ್ಲಿ ಎದುರಾಗುತ್ತಿರುವ ಕಷ್ಟ-ಕಾರ್ಪಣ್ಯಗಳಿಗೆಲ್ಲ ತನ್ನ ಹೆಣ್ಣು ಮಗುವೇ ಕಾರಣವೆಂದು 7 ತಿಂಗಳ ಕಂದಮ್ಮನನ್ನು ತಾಯಿಯೇ ಬಕೆಟ್ ನಲ್ಲಿ ಮುಳುಗಿಸಿ ಸಾಯಿಸಿರುವ ಘೋರ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ಹಜ್ರತ್ ನಿಜಾಮುದ್ದೀನ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹೆತ್ತ ಮಗುವನ್ನು ಕೊಂದ ಪಾಪಿ ತಾಯಿ 27 ವರ್ಷದ ಅದಿಬಾ ಖಾನ್ ಳನ್ನು ಈಗ ಪೊಲೀಸರು ಬಂಧಿಸಿದ್ದಾರೆ.

ಹೆಣ್ಣು ಮಗು ಹುಟ್ಟಿದ ಬಳಿಕ ಆರ್ಥಿಕ ಸಂಕಷ್ಟ ಹೆಚ್ಚಾಗಿದೆ. ಕುಟುಂಬದಲ್ಲಿನ ತೊಂದರೆಗಳಿಗೆಲ್ಲ ತನ್ನ 7 ತಿಂಗಳ ಹೆಣ್ಣು ಮಗುವೇ ಕಾರಣವೆಂದು ಅದಿಬಾ ಖಾನ್ ಮಗುವಿನ ಕತ್ತಿಗೆ ದುಪ್ಪಟ್ಟದಿಂದ ಬಿಗಿದು, ಬಕೆಟ್ ನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಸಾಯಿಸಿದ್ದಾಳೆ.

ಮಗು ಸತ್ತ ಬಳಿಕ ಅದೇ ಬಕೆಟ್ ನಲ್ಲಿ ಮಗುವನ್ನು ಮುಳುಗಿಸಿ, ಮಗು ಬಕೆಟ್ ನಲ್ಲಿ ಆಕಸ್ಮಿಕವಾಗಿ ಬಿದ್ದು ಸತ್ತಿದೆ ಎಂಬಂತೆ ಬಿಂಬಿಸಿದ್ದಾಳೆ. ಪೊಲೀಸರ ಮುಂದೆಯೂ ಇದನ್ನೇ ಹೇಳಿದ್ದಾಳೆ. ಆದರೆ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದಾಗ ಸತ್ಯ ಬಯಲಾಗಿದೆ. ಅದಿಬಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಿಜ ಘಟನೆಯನ್ನು ಅದಿಬಾ ಬಾಯ್ಬಿಟ್ಟಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...