alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಡೆಲ್ ಪತ್ನಿ ಜೊತೆ ರಾಕ್ಷಸನಂತೆ ವರ್ತಿಸಿದ್ದ ಪತಿ

model priyanka kapoorತನ್ನ ಪತಿಯ ಚಿತ್ರಹಿಂದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ದೆಹಲಿ ಮಾಡೆಲ್ ಪ್ರಿಯಾಂಕಾ ಕಪೂರ್, ಪತಿಯಿಂದ ಹಿಂಸೆಗೊಳಗಾಗಿದ್ದ ವೇಳೆ ಅನುಭವಿಸಿದ್ದ ಯಮ ಯಾತನೆಯ ಫೋಟೋವನ್ನು ಆಕೆಯ ಸಹೋದರಿ ಡಿಂಪಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಮದುವೆಯಾದ ಕೇವಲ ವಾರಗಳಷ್ಟೇ ಕಳೆದಿದ್ದ ಸಂದರ್ಭದಲ್ಲಿ ಪ್ರಿಯಾಂಕಾ ಕಪೂರ್ ಪತಿ ನಿತಿನ್ ಚಾವ್ಲಾ ಆಕೆಯ ಮೇಲೆ ರಾಕ್ಷಸನಂತೆ ಹಲ್ಲೆ ನಡೆಸಿದ್ದು, ಇದರಿಂದಾಗಿ ಮಾಡೆಲ್ ಮುಖ ಊದಿಕೊಂಡಿದೆಯಲ್ಲದೇ ತಲೆ ಹಾಗೂ ತುಟಿಗೆ ಹೊಲಿಗೆಯನ್ನೂ ಹಾಕಲಾಗಿದೆ.

ಜನವರಿ 30 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರಿಯಾಂಕಾ ತನ್ನ ಸ್ನೇಹಿತರೊಬ್ಬರ ಜೊತೆ ಹೊರ ಹೋಗಿದ್ದಳೆಂಬ ಕಾರಣಕ್ಕೆ ನಿತಿನ್ ಚಾವ್ಲಾ ಇಂತಹ ಬರ್ಬರ ಹಲ್ಲೆ ನಡೆಸಿದ್ದನೆಂದು ಡಿಂಪಿ ತಿಳಿಸಿದ್ದಾರೆ. ಈತನ ನಿರಂತರ ದೌರ್ಜನ್ಯ ತಾಳಲಾರದೆ ಅಂದು ತನ್ನ ಪೋಷಕರ ಬಳಿ ಪ್ರಿಯಾಂಕಾ ಹೋಗಿದ್ದು, ತಾವುಗಳು ಪೊಲೀಸರಿಗೆ ದೂರು ನೀಡಲು ಮುಂದಾದಾಗ ರಾಜಿ ಸಂಧಾನ ಮಾಡಿಕೊಂಡಿದ್ದರೆಂದು ಡಿಂಪಿ ತಿಳಿಸಿದ್ದಾರೆ. ಅಂದೇ ತಾವು ದೂರು ನೀಡಿದ್ದರೆ ಸಹೋದರಿಗೆ ಇಂತಹ ಸಾವು ಬರುತ್ತಿರಲಿಲ್ಲವೆಂದು ಡಿಂಪಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...