alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಕ್ ಪಾಕೆಟ್ ಮಾಡೋದ್ರಲ್ಲೂ ಇವರೇ ಮುಂದು..!

NEW DELHI, 27/06/2016: Metro services were affected on the Blue Line due to power outage in New Delhi on June 27, 2016. Photo: Shiv Kumar Pushpakar

ದೆಹಲಿ ಮೆಟ್ರೋದಲ್ಲಿ ಈ ಬಾರಿ ಕೂಡ ಕಳ್ಳಿಯರದ್ದೇ ದರ್ಬಾರ್. ಸಿಐಎಸ್ಎಫ್ ಬಲೆಗೆ ಬಿದ್ದ ಪಿಕ್ ಪಾಕೆಟರ್ ಗಳಲ್ಲಿ ಶೇ.91 ರಷ್ಟು ಮಹಿಳೆಯರೇ ಇದ್ದಾರೆ.

ಈ ವರ್ಷ ಒಟ್ಟು 479 ಪಿಕ್ ಪಾಕೆಟರ್ ಗಳು ಸಿಕ್ಕಿಬಿದ್ದಿದ್ದಾರೆ, ಅವರಲ್ಲಿ 438 ಮಂದಿ ಮಹಿಳೆಯರು. ಪ್ರತಿದಿನ ದೆಹಲಿ ಮೆಟ್ರೋದಲ್ಲಿ ಕಡಿಮೆ ಅಂದ್ರೂ 26 ಲಕ್ಷ ಜನರು ಪ್ರಯಾಣಿಸ್ತಾರೆ. ತಾವು ಕೂಡ ಪ್ರಯಾಣಿಕರ ಸೋಗಿನಲ್ಲಿ ಬಂದು ಕಳ್ಳಿಯರು ಹಣ ಎಗರಿಸುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ರಾಜಧಾನಿಯಲ್ಲಿ ನಡೆದ ಅಪರಾಧ ಚಟುವಟಿಕೆಯ ಪ್ರಮಾಣದಲ್ಲಿ ಮಹಿಳೆಯರ ಪಾಲು ಹೆಚ್ಚಾಗಿಯೇ ಇದೆ ಅಂತಾ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗಷ್ಟೆ ಕಳ್ಳಿಯರ ದೊಡ್ಡ ಗ್ಯಾಂಗ್ ಒಂದನ್ನು ಸಿಐಎಸ್ಎಫ್ ಬಂಧಿಸಿತ್ತು. ಆ ಚಾಲಾಕಿ ಮಹಿಳೆಯರು ದೆಹಲಿ ಮೆಟ್ರೋದಲ್ಲಿ ಮಹಿಳೆಯೊಬ್ಬಳ ಚಿನ್ನಾಭರಣ ಕದ್ದಿದ್ದರು. ಕಳ್ಳಿಯರು ಕೈಯ್ಯಲ್ಲೊಂದು ಚಿಕ್ಕ ಮಗುವನ್ನೆತ್ತಿಕೊಂಡು ಬರ್ತಾರೆ, ಪ್ರಯಾಣಿಕರ ಗುಂಪಿನಲ್ಲಿ ಸೇರಿಕೊಂಡು ಅವರ ಪರ್ಸ್, ಮೊಬೈಲ್ ಹೀಗೆ ಬೆಲೆಬಾಳುವ ಯಾವ ವಸ್ತು ಸಿಕ್ಕಿದ್ದರೂ ಅದನ್ನು ಎಗರಿಸಿಬಿಡ್ತಾರೆ. ಇವರನ್ನು ಹಿಡಿಯಲು ಪೊಲೀಸರು ಕೂಡ ಪ್ರಯಾಣಿಕರ ಸೋಗಿನಲ್ಲೇ ಕಾರ್ಯಾಚರಣೆ ನಡೆಸಿದ್ದು ವಿಶೇಷ. 2014 ರಲ್ಲೂ ದೆಹಲಿ ಮೆಟ್ರೋದಲ್ಲಿ ನಡೆದ ಒಟ್ಟು ಕಳ್ಳತನಗಳಲ್ಲಿ ಮಹಿಳೆಯರ ಪಾಲು ಶೇ.94 ರಷ್ಟಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...