alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳರು, ಪಿಕ್ ಪಾಕೆಟರ್ ಗಳೇ ಈ ಕಂಪನಿಯ ನೌಕರರು..!

company

47 ವರ್ಷದ ನಂದ ಕಿಶೋರ್ ಅಲಿಯಾಸ್ ಕರಾಟೆ ಕೆಲ ವರ್ಷಗಳ ಹಿಂದೆ ಕಂಪನಿಯೊಂದನ್ನು ಆರಂಭಿಸಿದ್ದ. ಅವನೇ ಕಂಪನಿಯ ಮ್ಯಾನೇಜರ್, ಉದ್ಯೋಗಿಗಳನ್ನು ಕೂಡ ನೇಮಕ ಮಾಡಿಕೊಂಡಿದ್ದ. ಅವರಿಗೆ ಸಂಬಳವನ್ನೂ ಕೊಡ್ತಿದ್ದ.

ಅಷ್ಟಕ್ಕೂ ನಂದ ಕಿಶೋರ್ ನ ಕಂಪನಿಯಲ್ಲಿ ಕೆಲಸಕ್ಕಿದ್ದವರು ಯಾರು ಗೊತ್ತಾ? ಸರಗಳ್ಳರು, ಮನೆಗಳ್ಳರು ಹಾಗೂ ಪಿಕ್ ಪಾಕೆಟರ್ ಗಳು. ಇತ್ತೀಚೆಗಷ್ಟೆ ತನ್ನ ಕಂಪನಿಯನ್ನು ನಂದ ಕಿಶೋರ್ ಮಗನಿಗೆ ಹಸ್ತಾಂತರ ಮಾಡಿದ್ದ. 22 ವರ್ಷದ ಆ ಯುವಕ ಈ ದಂಧೆಗೆ ಇನ್ನೂ ಹೊಸಬ.

ಸದ್ಯ ತಂದೆ- ಮಗ ಇಬ್ಬರೂ ದೆಹಲಿ ಪೊಲೀಸರ ಅತಿಥಿಯಾಗಿದ್ದಾರೆ. 1992ರಲ್ಲಿ ಕರಾಟೆ ದುಷ್ಕೃತ್ಯ ಶುರು ಮಾಡಿದ್ದ. ದರೋಡೆ, ಕಳವು, ಪಿಕ್ ಪಾಕೆಟ್, ಡ್ರಗ್ ಡೀಲಿಂಗ್ ಇದೇ ಅವನ ಕಾಯಕವಾಗಿತ್ತು. ಆದ್ರೆ ಇದರಲ್ಲಿ ಬಂದ ಲಾಭ ಅವನಿಗೆ ಸಾಕಾಗುತ್ತಿರಲಿಲ್ಲ. ದೊಡ್ಡ ಪ್ರಮಾಣದಲ್ಲಿ ದಂಧೆ ಮಾಡಲು ಪ್ಲಾನ್ ಮಾಡಿಕೊಂಡಿದ್ದ.

ಅದಕ್ಕಾಗಿಯೇ ಕಳ್ಳರು, ಖದೀಮರನ್ನೆಲ್ಲ ನೇಮಕ ಮಾಡಿಕೊಂಡು 30 ಸದಸ್ಯರ ದೊಡ್ಡ ಗ್ಯಾಂಗ್ ಕಟ್ಟಿದ್ದ. ಅದಕ್ಕೆ ಕಂಪನಿ ಅಂತಾ ಹೆಸರಿಟ್ಟಿದ್ದ. ತನ್ನ ಗ್ಯಾಂಗ್ ಸದಸ್ಯರನ್ನೆಲ್ಲ ಮಷಿನ್ ಅಂತಾ ಕರೆಯುತ್ತಿದ್ದ. ಅವರಿಗೆಲ್ಲ ದಿನದ ಲೆಕ್ಕದಲ್ಲಿ ಸಂಬಳವನ್ನು ಕೊಡ್ತಿದ್ದ. ಕದ್ದ ಮಾಲುಗಳನ್ನೆಲ್ಲ ಮಾರಾಟ ಮಾಡುವ ಕೆಲಸ ಮಗನದ್ದಾಗಿತ್ತು.

ಬಂಧಿತ ಕರಾಟೆ ಮತ್ತವನ ಮಗನ ಬಳಿ ಕದ್ದಿದ್ದ 54 ಸ್ಮಾರ್ಟ್ ಫೋನ್ ಗಳು, 11 ಲ್ಯಾಪ್ ಟಾಪ್ ಮತ್ತು 2 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಈ ಗ್ಯಾಂಗ್ ನಡೆಸ್ತಿದ್ದ ಕರಾಟೆ ತಿಂಗಳಿಗೆ 2-4 ಲಕ್ಷ ರೂಪಾಯಿ ಲಾಭ ಮಾಡ್ತಿದ್ದ ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...