alex Certify
ಕನ್ನಡ ದುನಿಯಾ       Mobile App
       

Kannada Duniya

ಈತ ಮಾಡಿದ್ದ ಸಂಚು ಕೇಳಿ ಪೊಲೀಸರಿಗೂ ಶಾಕ್…!

ನವದೆಹಲಿ: ಸುಂದರವಾದ ತನ್ನ ಪತ್ನಿಯನ್ನು ಯಾರೂ ನೋಡಬಾರದೆಂದು ಕೊಲೆ ಮಾಡಲು ಸಿದ್ದನಾಗಿದ್ದ ಪತಿ ಮಹಾಶಯ ಬಳಿಕ ತನ್ನ ಯೋಚನೆ ಬದಲಿಸಿ ಪತ್ನಿಯನ್ನು ವೇಶ್ಯಾವಾಟಿಕೆಗೆ ಮಾರಾಟ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.

ಸದ್ದಾಮ್(32) ಸಮೀರಾ ಎಂಬಾಕೆಯನ್ನು ಎರಡನೇ ವಿವಾಹವಾಗಿದ್ದ. ಸದ್ದಾಮ್ ತನ್ನ ಪತ್ನಿ ಸಮೀರಾ ಜೊತೆ ಹೊರಗೆ ಹೋದಾಗಲೆಲ್ಲ ಎಲ್ಲಾ ಪುರುಷರು ಆಕೆಯ ಸೌಂದರ್ಯವನ್ನು ಕಂಡು ಆಕೆಯನ್ನೇ ನೋಡುತ್ತಿದ್ದರು. ಇದನ್ನು ಸಹಿಸದ ಪತಿ ಅಸೂಯೆ ಪಡುತ್ತಿದ್ದ. ಅಲ್ಲದೇ ಇದೇ ವಿಷಯಕ್ಕೆ ಪತಿ-ಪತ್ನಿ ನಡುವೆ ಜಗಳವಾಗಿ ಒಂದೇ ಮನೆಯಲ್ಲಿ ಇಬ್ಬರು ಪ್ರತ್ಯೇಕವಾಗಿ ವಾಸವಾಗಿದ್ದರು.

ಆಗಸ್ಟ್ 1 ರಂದು ಕೂಡ ಸದ್ದಾಮ್, ಸಮೀರಾ ಜೊತೆ ಶಾಪಿಂಗ್‍ ಹೋಗಿದ್ದಾಗ ವ್ಯಕ್ತಿಯೊಬ್ಬ ಆಕೆಯನ್ನು ದಿಟ್ಟಿಸಿ ನೋಡಿದ್ದ. ಇದರಿಂದ ಕೆಂಡಾಮಂಡಲನಾದ ಸದ್ದಾಮ್, ಪತ್ನಿಯನ್ನು ಕೊಲ್ಲಲು ನಿರ್ಧರಿಸಿದ್ದಾನೆ. ಆದರೆ ಮಾರನೆ ದಿನವಾಗುತ್ತಲೇ ತನ್ನ ಯೋಚನೆ ಬದಲಿಸಿಕೊಂಡ ಸದ್ದಾಮ್ ಪತ್ನಿಯನ್ನು ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡಲು ಮುಂದಾಗಿದ್ದಾನೆ. ಅದಕ್ಕಾಗಿ ದೆಹಲಿಯಲ್ಲಿರುವ ಎಲ್ಲ ವೇಶ್ಯಾವಾಟಿಕೆ ಅಡ್ಡೆ ಹಾಗೂ ಪಿಂಪ್‍ಗಳ ಬಗ್ಗೆ ವಿಚಾರಿಸಿಕೊಂಡಿದ್ದಾನೆ. ಈ ನಡುವೆ ಆತನಿಗೆ ಅರಿವಿಲ್ಲದೇ ಮಫ್ತಿ ಪೊಲೀಸರ ಸಂಪರ್ಕಕ್ಕೆ ಸಿಕ್ಕಿದ್ದಾನೆ.

1.5 ಲಕ್ಷ ರೂ. ಗೆ ತನ್ನ ಪತ್ನಿಯನ್ನು ಮಾರಾಟ ಮಾಡುತ್ತೇನೆ ಎಂದು ತಿಳಿಸಿದ್ದಾನೆ. ಅಂತಿಮವಾಗಿ 1.2 ಲಕ್ಷ ರೂ. ಗೆ ಮಾರಲು ಒಪ್ಪಿಕೊಂಡಿದ್ದಾನೆ. ಮುಂಚಿತ ಹಣ ನೀಡಿದರೆ ಪತ್ನಿ ತೋರಿಸುವುದಾಗಿ ತಿಳಿಸಿದ್ದಾನೆ. ಅದರಂತೆ ಪೊಲೀಸರು 10 ಸಾವಿರ ರೂ. ನೀಡಿದ್ದಾರೆ. ಹಣ ಸಿಕ್ಕ ತಕ್ಷಣ ಸದ್ದಾಮ್ ತನ್ನ ಪತ್ನಿಯನ್ನು ಕರೆ ತಂದಿದ್ದಾನೆ. ತಕ್ಷಣ ಪೊಲೀಸರು ಸದ್ದಾಮ್ ನನ್ನು ಬಂಧಿಸಿದ್ದಾರೆ. ಇದಾವ ವಿಚಾರವೂ ಗೊತ್ತೇ ಇಲ್ಲದ ಪತ್ನಿ ಸಮೀರಾ, ಪತಿ ತನಗೆ ಬೀಸಿದ್ದ ಮೋಸದ ಜಾಲವನ್ನು ತಿಳಿದು ಶಾಕ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...