alex Certify
ಕನ್ನಡ ದುನಿಯಾ       Mobile App
       

Kannada Duniya

ಡಿ ಆರ್ ಐ ಕಚೇರಿಯಿಂದ ಜಿಗಿದು ಚಿನ್ನದ ವ್ಯಾಪಾರಿ ಆತ್ಮಹತ್ಯೆ

ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ದೆಹಲಿ ಮೂಲದ ಚಿನ್ನದ ವ್ಯಾಪಾರಿ 40 ವರ್ಷದ ಗೌರವ್ ಗುಪ್ತಾ ಕಂದಾಯ ಗುಪ್ತಚರ ನಿರ್ದೇಶನಾಲಯದ ವಿಸಿಟರ್ಸ್ ರೂಂ ನ ಕಿಟಕಿಯಿಂದ ಜಿಗಿದು ಪ್ರಾಣಬಿಟ್ಟಿದ್ದಾರೆ.

ದೆಹಲಿಯ ಡಿ ಆರ್ ಐ ಆಫೀಸಿನ ವಿಸಿಟರ್ಸ್ ರೂಂನಲ್ಲಿ ಕುಳಿತಿದ್ದ ಗುಪ್ತಾ 6 ನೇ ಮಹಡಿಯಲ್ಲಿರುವ ಕಿಟಕಿಯಿಂದ ಜಿಗಿದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಗೌರವ್ ಗುಪ್ತಾ ಮನೆಯಲ್ಲಿದ್ದ 6 ಕೆಜಿ ವಿದೇಶಿ ಚಿನ್ನ, 213 ಕೆಜಿ ಬೆಳ್ಳಿಯನ್ನು ಹಾಗೂ 48 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದು, ನಿನ್ನೆ ಮತ್ತೆ 35 ಕೆಜಿ ವಿದೇಶಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ ಗುಪ್ತಾ ಪತ್ನಿ ಸ್ತುತಿ ಗುಪ್ತಾ ಡಿ ಆರ್ ಐ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...