alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಮ್ ಟ್ರೈನರ್ ಲವ್ ಗೆ ಬಿದ್ದ ಸೊಸೆ ಇಂಥ ಕೆಲಸ ಮಾಡಿದ್ಲು..!

murder_conspiracy__1498146130_749x421

ದೆಹಲಿ ಸೊಸೆಯೊಬ್ಬಳು ಪ್ರೀತಿಗಾಗಿ ಮಾಡಿದ ಕೆಲಸ ಎಲ್ಲರನ್ನೂ ದಂಗಾಗಿಸುವಂತಿದೆ. ಜಿಮ್ ತರಬೇತಿದಾರನೊಬ್ಬನನ್ನು ಪ್ರೀತಿ ಮಾಡಿದ ಮಹಿಳೆ ಇದಕ್ಕೆ ಅಡ್ಡಿಯಾಗ್ತಿದ್ದ ಪತಿ, ಮಕ್ಕಳ ಜೊತೆ ತನ್ನ ಗಂಡನ ಮನೆಯವರನ್ನು ಹತ್ಯೆಗೈಯ್ಯಲು ಯತ್ನಿಸಿದ್ದಾಳೆ. ಮಹಿಳೆ ಬಣ್ಣ ಬಯಲಾಗಿದ್ದು, ಮಹಿಳೆ ಹಾಗೂ ಆಕೆಯ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೀನಾಕ್ಷಿ ಎಂಬಾಕೆ ತನ್ನ ಪತಿ, ಮಕ್ಕಳು ಹಾಗೂ ಗಂಡನ ಮನೆಯವರ ಜೊತೆ ದೆಹಲಿಯಲ್ಲಿ ವಾಸವಾಗಿದ್ದಾಳೆ. ಅನೇಕ ವರ್ಷಗಳಿಂದ ಆಕೆ ಅಲ್ಲಿಯೇ ಇರುವ ಜಿಮ್ ಒಂದಕ್ಕೆ ಹೋಗ್ತಿದ್ದಾಳೆ. ಎರಡು ವರ್ಷಗಳ ಹಿಂದೆ ಜಿಮ್ ತರಬೇತಿದಾರ ಅಬ್ದುಲ್ ಎಂಬಾತನ  ಪ್ರೀತಿಗೆ ಬಿದ್ದಿದ್ದಾಳೆ.

ಈ ವಿಷ್ಯ ಕೆಲ ದಿನಗಳ ಹಿಂದೆ ಮೀನಾಕ್ಷಿ ಗಂಡನ ಮನೆಯವರಿಗೆ ತಿಳಿದಿದೆ. ಅವರು ಮೀನಾಕ್ಷಿಗೆ ಬುದ್ದಿ ಹೇಳಿದ್ದಾರೆ. ಆದ್ರೆ ಅಬ್ದುಲ್ ಪ್ರೀತಿಯಲ್ಲಿ ತೇಲಾಡುತ್ತಿದ್ದ ಮೀನಾಕ್ಷಿ ಭಯಾನಕ ಹೆಜ್ಜೆ ಇಟ್ಟಿದ್ದಾಳೆ. ಮನೆಯವರಿಗೆಲ್ಲ ಅರವಳಿಕೆ ಮದ್ದು ತಿನ್ನಿಸಿದ್ದಾಳೆ. ನಂತ್ರ ಗಂಡ ಹಾಗೂ ಅತ್ತೆ ಕತ್ತು ಕತ್ತರಿಸಲು ಯತ್ನಿಸಿದ್ದಾಳೆ. ಜೊತೆಗೆ ತಾನೂ ಪ್ರಜ್ಞೆ ತಪ್ಪಿದಂತೆ ನಾಟಕವಾಡಿದ್ದಾಳೆ. ಅಬ್ದುಲ್ ಮನೆಯಲ್ಲಿದ್ದ ಹಣ-ಆಭರಣವನ್ನು ಲೂಟಿ ಮಾಡುವ ತಯಾರಿ ನಡೆಸಿದ್ದ ಎನ್ನಲಾಗಿದೆ.

ಮಕ್ಕಳು, ಪತಿ ಸೇರಿ ಮನೆಯಲ್ಲಿದ್ದ 8 ಮಂದಿ ಪ್ರಜ್ಞೆ ತಪ್ಪಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಅಬ್ದುಲ್ ಹಾಗೂ ಮೀನಾಕ್ಷಿಯನ್ನು ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...