alex Certify
ಕನ್ನಡ ದುನಿಯಾ       Mobile App
       

Kannada Duniya

ಸುದ್ದಿ ವಾಹಿನಿ ಮುಖ್ಯಸ್ಥನಿಂದ್ಲೇ ಮಹಿಳಾ ಉದ್ಯೋಗಿ ಮೇಲೆ ಅತ್ಯಾಚಾರ

ಮಹಿಳಾ ಉದ್ಯೋಗಿ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಹಿಂದಿ ಸುದ್ದಿ ವಾಹಿನಿಯ ಮುಖ್ಯಸ್ಥರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 13ರಂದು ನೊಂದ ಮಹಿಳೆ ತುಘಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ಲು.

ಆರೋಪಿಯನ್ನು ಉಮೇಶ್ ಕುಮಾರ್ ಅಂತಾ ಗುರುತಿಸಲಾಗಿದೆ. 2016ರಲ್ಲಿ ಮಹಿಳೆಗೆ ಆತನ ಪರಿಚಯವಾಗಿತ್ತು. ಕಳೆದ ಜೂನ್ ನಲ್ಲಿ ಉಮೇಶ್ ಕುಮಾರ್ ಮಹಿಳೆಯನ್ನು ತನ್ನ ನಿವಾಸಕ್ಕೆ ಆಹ್ವಾನಿಸಿದ್ದ. ಮದುವೆಯಾಗುವುದಾಗಿ ನಂಬಿಸಿ ಅವಳೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾನಂತೆ.

ನಂತರ ಆಗಸ್ಟ್ ನಲ್ಲಿ ಹೋಟೆಲ್ ಒಂದಕ್ಕೆ ಅವಳನ್ನು ಬರಹೇಳಿದ್ದ ಉಮೇಶ್, ಅಲ್ಲೂ ಅವಳನ್ನು ದೈಹಿಕವಾಗಿ ಬಳಸಿಕೊಂಡಿದ್ದ. ಆದ್ರೆ ಆತ ವಿವಾಹಿತ ಅನ್ನೋದು ಮಹಿಳೆಗೆ ಬಳಿಕ ಗೊತ್ತಾಗಿತ್ತು. ಉಮೇಶ್ ಕುಮಾರ್ ಹೆಸರಲ್ಲಿ ಹೋಟೆಲ್ ಬುಕ್ ಆಗಿದ್ದನ್ನು ಸಿಬ್ಬಂದಿ ಕೂಡ ದೃಢಪಡಿಸಿದ್ದಾರೆ. ಇದೀಗ ನ್ಯಾಯಕ್ಕಾಗಿ ಮಹಿಳೆ ಠಾಣೆಯ ಮೆಟ್ಟಿಲೇರಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...