alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 3 ನಿಮಿಷದಲ್ಲಿ ನಡೆದಿತ್ತು ಪ್ರದ್ಯುಮನ್ ಹತ್ಯೆ..!

ರಯಾನ್ ಇಂಟರ್ನ್ಯಾಷನಲ್ ಸ್ಕೂಲಿನಲ್ಲಿ ನಡೆದ ಪ್ರದ್ಯುಮನ್ ಹತ್ಯೆ ಪ್ರಕಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಕಲೆ ಹಾಕುವಲ್ಲಿ ಸಿಬಿಐ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. 11ನೇ ತರಗತಿ ವಿದ್ಯಾರ್ಥಿಯೇ ಅಪರಾಧಿ ಎಂಬುದು ದೃಢಪಟ್ಟಿದೆ. ಜುವೆನೈಲ್ ಜಸ್ಟೀಸ್ ಮುಂದೆಯೂ ವಿದ್ಯಾರ್ಥಿ ತಪ್ಪೊಪ್ಪಿಕೊಂಡಿದ್ದಾನೆ.

ಮೂರು ದಿನಗಳ ಸಿಬಿಐ ಕಸ್ಟಡಿ ನಂತ್ರ ಆರೋಪಿ ವಿದ್ಯಾರ್ಥಿಯನ್ನು ಜುವೆನೈಲ್ ಜಸ್ಟೀಸ್ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿ ತಪ್ಪೊಪ್ಪಿಕೊಂಡಿದ್ದಾನೆ. ಪರೀಕ್ಷೆಯನ್ನು ಮುಂದೂಡಲು ಈ ಕೃತ್ಯವೆಸಗಿದ್ದೆ ಎಂದಿದ್ದಾನೆ. ಕೊಲೆಗೂ ಮುನ್ನ ಪ್ರದ್ಯುಮನ್ ಮುಗ್ದ ಎಂಬ ಭಾವನೆ ತನ್ನ ತಲೆಯಲ್ಲೂ ಬಂದಿತ್ತು ಎಂದಿದ್ದಾನೆ.

ಪರೀಕ್ಷೆಗೆ ಸಿದ್ಧನಾಗಿ ಬಂದಿರಲಿಲ್ಲ. ಶೌಚಾಲಯಕ್ಕೆ ಹೋದ ವೇಳೆ ಅಲ್ಲಿಗೆ ಪ್ರದ್ಯುಮನ್ ಬಂದಿದ್ದ. ನನಗೆ ಸಹಾಯ ಮಾಡ್ತೀಯಾ ಅಂತಾ ಆತನನ್ನು ಕೇಳ್ದೆ. ಹುಂ ಅಣ್ಣ. ಮಾಡ್ತೇನೆ ಎಂದ. ತಕ್ಷಣ ಕ್ಲಾಸ್ ರೂಮಿಗೆ ಹೋಗಿ ಚಾಕು ತಂದು ಆತನ ಮೇಲೆ ಹಲ್ಲೆ ನಡೆಸಿದೆ. ಘಟನೆಯಲ್ಲಿ ನನ್ನ ಕೈ ಅಥವಾ ಮೈಗೆ ರಕ್ತ ಅಂಟಿರಲಿಲ್ಲ. ಹಾಗಾಗಿ ನಾನೇ ಓಡಿ ಹೋಗಿ ಎಲ್ಲರಿಗೂ ವಿಷ್ಯ ತಿಳಿಸಿದೆ ಎಂದಿದ್ದಾನೆ ಆರೋಪಿ. ನವೆಂಬರ್ 22ರಂದು ಮಂಡಳಿ ಇನ್ನೊಂದು ಸುತ್ತಿನ ವಿಚಾರಣೆ ನಡೆಸಲಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...