alex Certify
ಕನ್ನಡ ದುನಿಯಾ       Mobile App
       

Kannada Duniya

ಬಾತ್ ರೂಮಿನಲ್ಲಿ ಬಟ್ಟೆ ಬದಲಾಯಿಸ್ತಿದ್ದ ಯುವತಿ ಬೆಚ್ಚಿ ಬಿದ್ದಿದ್ಯಾಕೆ?

ಹೋಟೆಲ್ ಕೋಣೆಯಲ್ಲಿ ವಿದ್ಯಾರ್ಥಿನಿ ಬಟ್ಟೆ ಬದಲಾಯಿಸ್ತಾ ಇರೋ ದೃಶ್ಯವನ್ನು ರಹಸ್ಯವಾಗಿ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದ ಚೆನ್ನೈ ಮೂಲದ ಉದ್ಯಮಿಯನ್ನು ಬಂಧಿಸಲಾಗಿದೆ. ದೆಹಲಿಯ ಜಾಗಿರ್ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ.

ರಾಂಚಿ ಮೂಲದ 23 ವರ್ಷದ ಯುವತಿ ಉದ್ಯಮಿಯ ನೀಚ ಕೃತ್ಯದ ಬಗ್ಗೆ ದೂರು ದಾಖಲಿಸಿದ್ದಳು. ವಿದ್ಯಾರ್ಥಿನಿ ಸಹಪಾಠಿಗಳೊಂದಿಗೆ ಶೈಕ್ಷಣಿಕ ಪ್ರವಾಸಕ್ಕಾಗಿ ದೆಹಲಿಗೆ ಬಂದಿದ್ಲು. ಅವರು ತಂಗಿದ್ದ ಹೋಟೆಲ್ ನಲ್ಲೇ ಉದ್ಯಮಿ ದೀಪಕ್ ಬೋರಾ ಕೂಡ ಉಳಿದುಕೊಂಡಿದ್ದ.

ಬಾತ್ ರೂಮಿನಲ್ಲಿ ವಿದ್ಯಾರ್ಥಿನಿ ಬಟ್ಟೆ ಬದಲಾಯಿಸುತ್ತಿದ್ಲು. ವೆಂಟಿಲೇಶನ್ ಮೂಲಕ ಯಾರೊ ತನ್ನನ್ನು ನೋಡುತ್ತಿರುವಂತೆ ಅವಳಿಗೆ ಅನಿಸಿತ್ತು. ಮೊಬೈಲ್ ನಲ್ಲಿ ವ್ಯಕ್ತಿಯೊಬ್ಬ ಎಲ್ಲವನ್ನೂ ರೆಕಾರ್ಡ್ ಮಾಡಿಕೊಳ್ತಿರೋದನ್ನು ನೋಡಿದ ವಿದ್ಯಾರ್ಥಿನಿ ಕೂಡಲೇ ತನ್ನ ಶಿಕ್ಷಕರು ಮತ್ತು ಸಹಪಾಠಿಗಳಿಗೆ ಮಾಹಿತಿ ನೀಡಿದ್ದಾಳೆ.

ಹೋಟೆಲ್ ಗೆ ಬಂದ ಪೊಲೀಸರು ತಪಾಸಣೆ ನಡೆಸಿದ್ರು. ಉದ್ಯಮಿ ದೀಪಕ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಹೋಟೆಲ್ ನಲ್ಲಿ ತಂಗಿದ್ದ. ಸ್ನೇಹಿತರ ಮೊಬೈಲ್ ಅನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೀಪಕ್ ನನ್ನು ಅರೆಸ್ಟ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...