alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪತ್ನಿ ಮುಂದೆ ದೌಲತ್ತು ತೋರಿಸಲು ಈತ ಮಾಡಿದ್ದೇನು ಗೊತ್ತಾ..?

ಸುಳ್ಳು ಹೇಳಿ ಎಂಬಿಎ ಪದವೀಧರೆ ಜೊತೆ ವಿವಾಹವಾಗಿದ್ದ ವ್ಯಕ್ತಿಯೊಬ್ಬ ಆಕೆಗೆ ತನ್ನ ಅಸಲಿಯತ್ತು ಅರಿವಾಗಿ ತೊರೆದ ಕಾರಣ ಶ್ರೀಮಂತಿಕೆಯನ್ನು ತೋರಿಸುವ ಸಲುವಾಗಿ ಬೆಟ್ಟಿಂಗ್, ಜೂಜು ಸೇರಿದಂತೆ ಹಲವು ಅಡ್ಡ ಮಾರ್ಗಗಳನ್ನಿಡಿದು ಕೊನೆಗೆ ಈ ಕಾರಣಕ್ಕಾಗಿ ಜೈಲು ಪಾಲಾಗಿದ್ದಾನೆ.

ಹರಿಯಾಣದ ಜಜ್ಜರಾ ಮೂಲದ ಅಮಿತ್ ಕುಮಾರ್ ಬಂಧಿತ ಆರೋಪಿಯಾಗಿದ್ದು, ದೆಹಲಿಯ ಜನಕ್ ಪುರಿಯಲ್ಲಿ ವಾಸವಾಗಿದ್ದ ಈತ ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ. ತಿಂಗಳಿಗೆ 15 ಸಾವಿರ ರೂ. ವರಮಾನ ಗಳಿಸುತ್ತಿದ್ದ ಅಮಿತ್ ಕುಮಾರ್ ಸುಳ್ಳು ಹೇಳಿ 2013 ರಲ್ಲಿ ಎಂಬಿಎ ಪದವೀಧರೆಯನ್ನು ವಿವಾಹವಾಗಿದ್ದ.

ಆದರೆ ತನ್ನ ಗಂಡ ಸುಳ್ಳು ಹೇಳಿ ಮದುವೆಯಾಗಿದ್ದನ್ನು ಅರಿತ ಮಹಿಳೆ ಆತನನ್ನು ತೊರೆದು ಪ್ರತ್ಯೇಕವಾಗಿ ವಾಸವಾಗಿದ್ದಳು. ಜೊತೆಗೆ ವಿವಾಹ ವಿಚ್ಚೇದನಕ್ಕೂ ಅರ್ಜಿ ಸಲ್ಲಿಸಿದ್ದಳು. ಪತ್ನಿ ಮುಂದೆ ಶೋಕಿ ತೋರಿಸಿಕೊಳ್ಳಲು ಮುಂದಾದ ಅಮಿತ್ ಕುಮಾರ್ ಬೆಟ್ಟಿಂಗ್, ಜೂಜು ಸೇರಿದಂತೆ ಅಡ್ಡ ದಾರಿ ಮೂಲಕ ಹಣ ಮಾಡಿದ್ದು, ಈ ಹಣದಿಂದ ಐಷಾರಾಮಿ ಆಡಿ ಕಾರನ್ನು ಖರೀದಿಸಿದ್ದ. ಆದರೆ ಕೆಲ ದಿನಗಳಲ್ಲೇ ಮತ್ತೆ ಹಣ ಕಳೆದುಕೊಂಡಿದ್ದು, ಇದನ್ನು ಸರಿದೂಗಿಸಲು ತನ್ನ ಆಡಿ ಕಾರನ್ನು ಮಾರಾಟ ಮಾಡಿದ್ದ.

ಆದರೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿಯ ಮುಂದೆ ತನ್ನ ಮಾನ ಹೋಗುತ್ತದೆಂಬ ಕಾರಣಕ್ಕೆ ಖತರ್ನಾಕ್ ಪ್ಲಾನ್ ಮಾಡಿದ ಅಮಿತ್ ಕುಮಾರ್, ತನ್ನ ಬಳಿಯಿದ್ದ ಡೂಪ್ಲಿಕೇಟ್ ಕೀ ಬಳಸಿ ತಾನು ಕಾರು ಮಾರಾಟ ಮಾಡಿದ್ದವರ ಮನೆಗೆ ತೆರಳಿ ಕಾರನ್ನು ಕದ್ದಿದ್ದಾನೆ. ಗಂಭೀರ ಪ್ರಕರಣವೊಂದರ ಕಾರಣಕ್ಕಾಗಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಸಿಕ್ಕಿ ಬಿದ್ದ ಅಮಿತ್ ಕುಮಾರ್, ಕೂಲಂಕುಷ ವಿಚಾರಣೆ ವೇಳೆ ಸತ್ಯಾಂಶ ಬಾಯ್ಬಿಟ್ಟಿದ್ದು, ಇದೀಗ ಜೈಲು ಪಾಲಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...