alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಮ್ಯಾನೇಜರ್ ಮನೆಯ ಸೂಟ್ ಕೇಸ್ ನಲ್ಲಿತ್ತು ಮಹಿಳೆಯ ಕೊಳೆತ ಶವ

ಕಸ್ಟಮರ್ ಕೇರ್ ಆಪರೇಟರ್ ಆಗಿದ್ದ ಮಹಿಳೆಯೊಬ್ಬಳ ಮೃತದೇಹ ಸೂಟ್ ಕೇಸ್ ನಲ್ಲಿ ಪತ್ತೆಯಾಗಿದೆ. ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿರುವ ಬ್ಯಾಂಕರ್ ದಂಪತಿಯ ಮನೆಯಲ್ಲಿ ಈ ಸೂಟ್ ಕೇಸ್ ದೊರೆತಿದೆ. ಪತಿ-ಪತ್ನಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ಮಹಿಳೆ ಶಿಲ್ಪಾ ಅಗರ್ವಾಲ್ ರಾಷ್ಟ್ರೀಯ ಬ್ಯಾಂಕ್ ಒಂದರ ಸಹಾಯಕ ಕೇಂದ್ರದಲ್ಲಿ ಕಸ್ಟಮರ್ ಕೇರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ಲು. ಅದೇ ಶಾಖೆಯಲ್ಲಿ ಮ್ಯಾನೇಜರ್ ಆಗಿದ್ದ ರಾಜೀವ್ ಕುಮಾರ್ ನ ಮನೆಯಲ್ಲಿ ಮೃತದೇಹವಿದ್ದ ಟ್ರಾಲಿ ಬ್ಯಾಗ್ ಸಿಕ್ಕಿದೆ.

ಶುಕ್ರವಾರ ಶಿಲ್ಪಾ, ಬರ್ದ್ವಾನ್ ಜಿಲ್ಲೆಯಲ್ಲಿರುವ ಆಂಟಿ ಮನೆಗೆ ಹೋಗುವುದಾಗಿ ಕುಟುಂಬಸ್ಥರ ಬಳಿ ಹೇಳಿದ್ದಳು. ಆದ್ರೆ ಅಲ್ಲಿಗೂ ಹೋಗಿರಲಿಲ್ಲ, ಶಿಲ್ಪಾ ಕಾಣೆಯಾಗಿರುವ ಬಗ್ಗೆ ಶನಿವಾರ ದೂರು ದಾಖಲಿಸಲಾಗಿತ್ತು. ರಾಜೀವ್ ಕುಮಾರ್ ನ ಅಪಾರ್ಟ್ಮೆಂಟ್ ನಲ್ಲಿ ಗಬ್ಬು ವಾಸನೆ ಬರ್ತಿರೋ ಸೂಟ್ ಕೇಸ್ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು.

ಆ ಸೂಟ್ ಕೇಸ್ ನಲ್ಲಿ ತುಂಡು ತುಂಡಾಗಿ ಕತ್ತರಿಸಿದ್ದ ಶಿಲ್ಪಾಳ ಮೃತದೇಹವಿತ್ತು. ಶವ ಕೊಳೆತಿದ್ದರಿಂದ ಗಬ್ಬು ವಾಸನೆ ಬರುತ್ತಿತ್ತು. ರಾಜೀವ್ ಶಿಲ್ಪಾಳಿಂದ 1 ಲಕ್ಷ ರೂಪಾಯಿ ಪಡೆದಿದ್ದ, ಅದನ್ನು ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಿದ್ದಾನೆ ಅಂತಾ ಶಿಲ್ಪಾ ಕುಟುಂಬದವರು ಹೇಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...