alex Certify
ಕನ್ನಡ ದುನಿಯಾ       Mobile App
       

Kannada Duniya

ಶವದ ಮೇಲೆ ಕಳ್ಳರ ಕಣ್ಣು….

ಬಂಗಾರ, ಬೆಳ್ಳಿ, ಹಣ, ಮೊಬೈಲ್ ಹೀಗೆ ಬೆಲೆ ಬಾಳುವ ವಸ್ತುಗಳು ಕಳ್ಳತನವಾಗೋದು ಮಾಮೂಲಿ. ಆದ್ರೆ ಉತ್ತರ ಪ್ರದೇಶದ ಬಂದಲ್ ಶಹರ್ ನಲ್ಲಿ ಸತ್ತ ಮೇಲೂ ನೆಮ್ಮದಿಯಿಲ್ಲ ಎನ್ನುವಂತಾಗಿದೆ. ಸ್ಮಶಾನದಿಂದ ಶವಗಳನ್ನು ಕಳ್ಳತನ ಮಾಡಲಾಗ್ತಿದೆ.

ಸ್ಮಶಾನದಲ್ಲಿ ಹೂತಿದ್ದ ಅನೇಕ ಶವಗಳು ಕಳ್ಳತನವಾಗಿವೆ. ಇದ್ರಿಂದ ಅಲ್ಲಿನ ಜನರು ಆತಂಕಗೊಂಡಿದ್ದಾರೆ. ಮೈ ಕೊರೆಯುವ ಚಳಿಯಲ್ಲಿ ಸ್ಮಶಾನ ಕಾಯುವ ಕೆಲಸ ಶುರು ಮಾಡಿದ್ದಾರೆ. ಶವವನ್ನು ತಾಂತ್ರಿಕರು ಕೊಂಡೊಯ್ದಿದ್ದಾರೆಂದು ಕೆಲವರು ಶಂಕೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಇದು ಮೆಡಿಕಲ್ ಕಾಲೇಜಿನ ಕೆಲಸ ಎನ್ನುತ್ತಿದ್ದಾರೆ.

ಇಬ್ಬರು ಮಕ್ಕಳ ಶವ ಕಳ್ಳತನವಾಗಿದ್ದು, ಮಕ್ಕಳಿಬ್ಬರು 15 ದಿನಗಳ ಹಿಂದೆ ಸಾವನ್ನಪ್ಪಿದ್ದರು. ಸತ್ತ ತಿಂಗಳೊಳಗೆ ಶವವನ್ನು ಕಳ್ಳತನ ಮಾಡಲಾಗ್ತಿದ್ದು, ಯಾರು ಮಾಡ್ತಿದ್ದಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...