alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯರಿಗೇ ವೇಶ್ಯಾವಾಟಿಕೆ ನಡೆಸಲು ಬಲವಂತ

dvg-dvg-m

ದಾವಣಗೆರೆ: ಇಬ್ಬರನ್ನು ಮದುವೆಯಾಗಿದ್ದ ವ್ಯಕ್ತಿಯೊಬ್ಬ, ಇಬ್ಬರನ್ನೂ ವೇಶ್ಯಾವಾಟಿಕೆಗೆ ನೂಕಲು ಮುಂದಾಗಿ, ಕೊಲೆಯಾದ ಸಂಗತಿ ಬೆಳಕಿಗೆ ಬಂದಿದೆ.

ದಾವಣಗೆರೆಯ ಹನುಮಂತಪ್ಪ(37) ಎಂಬಾತನ ಶವ ಇತ್ತೀಚೆಗೆ ಹರಿಹರ ರಸ್ತೆಯ ಬಾತಿ ಕೆರೆಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹನುಮಂತಪ್ಪ ಇಬ್ಬರನ್ನು ಮದುವೆಯಾಗಿದ್ದು, ಜೂಜಾಟವನ್ನೇ ಕಾಯಕ ಮಾಡಿಕೊಂಡಿದ್ದ. ಹಣಕ್ಕಾಗಿ ವೇಶ್ಯಾವಾಟಿಕೆ ನಡೆಸುವಂತೆ ಪತ್ನಿಯರಿಗೇ ಕಾಟ ಕೊಡುತ್ತಿದ್ದ ಎನ್ನಲಾಗಿದೆ.

ಈತನ 2 ನೇ ಪತ್ನಿಗೆ ಬೇರೆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವಿದ್ದು, ಈ ವಿಚಾರ ಗೊತ್ತಾದ ಬಳಿಕ ಹನುಮಂತಪ್ಪ ಆಕೆಯಿಂದ ಹಣ ಪಡೆದುಕೊಂಡಿದ್ದಾನೆ.

ಮತ್ತೆ ಹಣಕ್ಕಾಗಿ ಪೀಡಿಸಿದ್ದರಿಂದ ಮೊದಲ ಹಾಗೂ 2 ನೇ ಪತ್ನಿ ಸೇರಿಕೊಂಡು ಹನುಮಂತಪ್ಪನನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾರೆ.

ಪೊಲೀಸ್ ತನಿಖೆಯಲ್ಲಿ ಇದೆಲ್ಲ ವಿಚಾರ ಗೊತ್ತಾಗಿದ್ದು, ಐವರನ್ನು ಬಂಧಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...