alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿ ಜೊತೆ ಸೇರಿ ಅತ್ತೆ ಹತ್ಯೆಗೆ ಸ್ಕೆಚ್

ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಮತ್ತೊಮ್ಮೆ ಸಂಬಂಧಕ್ಕೆ ಕಳಂಕ ತರುವಂತಹ ಘಟನೆ ನಡೆದಿದೆ. ಸೊಸೆಯೊಬ್ಬಳು ಪ್ರೇಮಿ ಜೊತೆ ಸೇರಿ ತನ್ನ ಅತ್ತೆಯನ್ನು ಹತ್ಯೆ ಮಾಡಿದ್ದಾಳೆ. ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ಭಾನುವಾರ ಪೊಲೀಸರು ಮಾಧ್ಯಮಗಳಿಗೆ ವಿಷ್ಯ ತಿಳಿಸಿದ್ದಾರೆ.

ಕೊತ್ವಾಲಿ ಕ್ಷೇತ್ರದಲ್ಲಿ ರಾಧಾ ಎಂಬ ಮಹಿಳೆಯನ್ನು ಹಿಂದಿನ ವಾರ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರಿಗೆ ಕೊಲೆ ಹಿಂದೆ ಸೊಸೆಯಿರುವ ವಿಷ್ಯ ಗೊತ್ತಾಗಿದೆ.

ರಾಧಾ ಸೊಸೆ ಭಾವನಾ 7 ವರ್ಷಗಳ ಹಿಂದೆ ಆಶಿಶ್ ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದ್ರೆ ಭಾವನಾಳನ್ನು ಸೊಸೆಯಾಗಿ ರಾಧಾ ಒಪ್ಪಿಕೊಂಡಿರಲಿಲ್ಲ. ಹಾಗಾಗಿ ಭಾವನಾ ಬೇರೆ ಮನೆಯಲ್ಲಿದ್ದಳು. ಕೆಲ ವರ್ಷಗಳ ಹಿಂದೆ ಜೈಲಿನಲ್ಲಿದ್ದ ಮೋಹಿತ್ ಎಂಬಾತನ ಪರಿಚಯ ಭಾವನಾಳಿಗಾಗಿದೆ.ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಆದ್ರೆ ಮೊದಲ ಪತಿ ಆಶಿಶ್ ಗೆ ವಿಚ್ಛೇದನ ನೀಡಲು ಅತ್ತೆ ರಾಧಾ ಅಡ್ಡಿಯುಂಟು ಮಾಡಿದ್ದಾಳೆ. ದಾರಿಗೆ ಅಡ್ಡ ಬಂದ ಅತ್ತೆಯನ್ನು ಮುಗಿಸಲು ಪ್ಲಾನ್ ಮಾಡಿದ ಭಾವನಾ, ಪ್ರೇಮಿ ಹಾಗೂ ಸ್ನೇಹಿತರ ಜೊತೆ ಸೇರಿ ಹೇಯ ಕೃತ್ಯಕ್ಕಿಳಿದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...