alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳನ್ನೇ ದಂಧೆಗೆ ನೂಕಿದ್ದ ಮಹಿಳೆ ಪರಾರಿ

ckm-hony

ಚಿಕ್ಕಮಗಳೂರು: ಹನಿಟ್ರ್ಯಾಪ್ ದಂಧೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳು, ಪೊಲೀಸ್ ಠಾಣೆಯಿಂದಲೇ ಪರಾರಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು ಪ್ರಕಾಶ್, ನರೇಂದ್ರ, ಲಿಜೇಶ್ ಎಂಬುವವರನ್ನು ಬಂಧಿಸಿದ್ದರು.

ಅವರು ನೀಡಿದ ಮಾಹಿತಿ ಆಧರಿಸಿ, ನರಸಿಂಹರಾಜಪುರ ಠಾಣೆ ಪೊಲೀಸರು ಕೈರುನ್ನೀಸಾ, ರುಕ್ಸಾನಾ ಹಾಗೂ ಅರುಣ್ ಎಂಬುವವರನ್ನು ಬಂಧಿಸಿದ್ದಾರೆ.

ಕೈರುನ್ನಿಸಾ ಹನಿಟ್ರ್ಯಾಪ್ ಮೂಲಕ ಶ್ರೀಮಂತರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ವಂಚಿಸುತ್ತಿದ್ದಳು. ತಾನು ಮಾತ್ರವಲ್ಲದೇ, ತನ್ನ ಮಗಳು ರುಕ್ಸಾನಾಳನ್ನು ದಂಧೆಗೆ ಬಳಸಿಕೊಂಡಿದ್ದಾಳೆ.

50,000 ರೂ.ಗೆ 1 ವರ್ಷಕ್ಕೆ ಮಗಳನ್ನು ಅಗ್ರಿಮೆಂಟ್ ಮಾಡಿಕೊಟ್ಟಿದ್ದಳೆಂಬ ಮಾಹಿತಿ ತನಿಖೆಯಲ್ಲಿ ಗೊತ್ತಾಗಿದೆ. ಹನಿಟ್ರ್ಯಾಪ್ ದಂಧೆಯ ಈ ಪ್ರಕರಣವನ್ನು ನರಸಿಂಹರಾಜಪುರ ಠಾಣೆ ಪೊಲೀಸರು ಬಯಲಿಗೆಳೆಯುವ ಪ್ರಯತ್ನ ನಡೆಸಿದ್ದಾರೆ.

ಆದರೆ, ಠಾಣೆಯಲ್ಲಿದ್ದ ಅರುಣ್, ಕೈರುನ್ನೀಸಾ ಹಾಗೂ ರುಕ್ಸಾನಾ ಎಸ್ಕೇಪ್ ಆಗಿದ್ದಾರೆ. ಇವರು ಶಿವಮೊಗ್ಗದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...