alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಜೊತೆ ಡೇಟಿಂಗ್ ಆಫರ್ ನೀಡಿದವನು ಮಾಡಿದ್ದೇನು..?

fraud

ಜಗತ್ತಿನಲ್ಲಿ ಎಂತೆಂತ ಜನರಿರ್ತಾರೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ. ಚೆನ್ನೈನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನೇ ಡೇಟಿಂಗ್ ಗೆ ಕಳುಹಿಸುವುದಾಗಿ ಆಸೆ ತೋರಿಸಿ ಲೂಟಿ ಮಾಡಿದ್ದಾನೆ. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ವೆಂಕಟರಾಮನ್ ಎಂಬ ವ್ಯಕ್ತಿ ಜನರನ್ನು ವಂಚಿಸುತ್ತಿದ್ದ.

ಜಗದೀಶ್ವರನ್ ಎಂಬ ಯುವಕ ವೆಂಕಟರಾಮನ್ ದಂಪತಿ ಮೋಸಕ್ಕೆ ಬಲಿಯಾಗಿದ್ದಾನೆ. 16 ಲಕ್ಷ ರೂಪಾಯಿ ಬೆಲೆ ಬಾಳುವ ಬಂಗಾರ ಕಳೆದುಕೊಂಡ ನಂತ್ರ ಪೊಲೀಸರಿಗೆ ದೂರು ನೀಡಿದ್ದಾನೆ. ಆತನ ದೂರಿನ ಮೇರೆಗೆ ಪೊಲೀಸರು ವೆಂಕಟರಾಮನ್ ನನ್ನು ಬಂಧಿಸಿದ್ದು, ಪತ್ನಿ ಸಿಂಧುಜಾಗೆ ಬಲೆ ಬೀಸಿದ್ದಾರೆ.

ವೆಂಕಟರಾಮನ್ ತನ್ನ ಪತ್ನಿಯನ್ನು ಡೇಟಿಂಗ್ ಗೆ ಕಳುಹಿಸುವುದಾಗಿ ವೆಬ್ ಸೈಟೊಂದರಲ್ಲಿ ಜಾಹೀರಾತು ಪ್ರಕಟಿಸಿದ್ದ. ಇದನ್ನು ನೋಡಿದ ಜಗದೀಶ್ವರನ್ ವೆಂಕಟರಾಮನ್ ಸಂಪರ್ಕಿಸಿದ್ದಾನೆ. ನಂತ್ರ ವೆಂಕಟರಾಮನ್ ಪತ್ನಿ ಸಮೇತ ಜಗದೀಶ್ವರನ್ ಮನೆಗೆ ಬಂದಿದ್ದಾನೆ. ಅಲ್ಲಿ ಜಗದೀಶ್ವರನ್ ಹಾಗೂ ಸಿಂಧುಜಾ ಮಾತನಾಡುತ್ತ ಕುಳಿತಿದ್ದರೆ, ಮನೆಯೊಳಗೆ ಹೋದ ವೆಂಕಟರಾಮನ್ ಮನೆಯಲ್ಲಿದ್ದ ಒಡವೆ, ಹಣವನ್ನು ಚೀಲಕ್ಕೆ ತುಂಬಿದ್ದಾನೆ.

ಮಾತುಕತೆ ಮಧ್ಯೆ ಸಿಂಧುಜಾ ಹೊಟ್ಟೆನೋವಿನ ನಾಟಕವಾಡಿದ್ದಾಳೆ. ಆಗ ವೆಂಕಟರಾಮನ್  ಸಿಂಧುಜಾಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅವರು ಬಂದು ಹೋದ ಮೇಲೆ ಮನೆಯೊಳಗೆ ನೋಡಿದ ಜಗದೀಶ್ವರನ್ ಕಂಗಾಲಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...