alex Certify
ಕನ್ನಡ ದುನಿಯಾ       Mobile App
       

Kannada Duniya

”ಆ ಮೂರು ರಾತ್ರಿ ಪಶುಗಳಂತೆ ನಡೆದುಕೊಂಡ್ರು”-ನೊಂದ ಮಹಿಳೆಯ ನೋವಿನ ನುಡಿ

ದೆಹಲಿಯ ಫತೇಹಪುರ್ ಶನಿ ಆಶ್ರಮದ ದಾತಿ ಮಹಾರಾಜ್ ವಿರುದ್ಧ ಮಹಿಳೆಯೊಬ್ಬಳು ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ವಿಚಾರಣೆ ಶುರು ಮಾಡಿದ್ದಾರೆ. ಈ ಮಧ್ಯೆ ಪೀಡಿತ ಮಹಿಳೆ ತನ್ನ ನೋವನ್ನು ಪತ್ರದ ಮೂಲಕ ಎಲ್ಲರಿಗೂ ತಿಳಿಸಿದ್ದಾಳೆ.

ಮಹಿಳೆ ಪತ್ರದಲ್ಲಿ ತನ್ನ ನೋವಿನ ಜೊತೆ ತನ್ನ ಹಾಗೂ ತನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದಿದ್ದಾಳೆ. ಡೋಂಗಿ ಬಾಬಾ ತನ್ನ ಜೀವ ತೆಗೆಯಲು ಹೇಸುವುದಿಲ್ಲ. ಧೈರ್ಯ ಮಾಡಿ ಜನರ ಮುಂದೆ ಬಂದಿದ್ದೇನೆ. ನನ್ನಂತೆ ಉಳಿದ ಮಹಿಳೆಯರಿಗೆ ಶಿಕ್ಷೆಯಾಗದಿರಲಿ ಎನ್ನುವುದು ನನ್ನ ಉದ್ದೇಶ ಎಂದು ಮಹಿಳೆ ಹೇಳಿದ್ದಾಳೆ.

ಕಳೆದ 10 ವರ್ಷಗಳಿಂದ ಆಶ್ರಮದಲ್ಲಿದ್ದ ಮಹಿಳೆ ಈಗ ರಾಜಸ್ತಾನದಲ್ಲಿರುವ ತನ್ನ ಮನೆಗೆ ವಾಪಸ್ ಬಂದಿದ್ದಾಳೆ. ಮೊದಲು ತಂದೆ-ತಾಯಿ ಮುಂದೆ ನೋವು ತೋಡಿಕೊಂಡಿದ್ದಳಂತೆ. ಪಾಲಕರ ಬೆಂಬಲ ಸಿಕ್ಕ ನಂತ್ರ ಹೋರಾಟಕ್ಕೆ ಮುಂದಾಗಿದ್ದಾಳೆ.

2016ರಲ್ಲಿ ದಾತಿ ಮಹಾರಾಜ್ ಹಾಗೂ ಆತನ ಮೂವರು ಶಿಷ್ಯರು ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದರಂತೆ. ಮೂರು ದಿನ ರಾತ್ರಿ ಮೃಗಗಳಂತೆ ನಡೆದುಕೊಂಡಿದ್ದರಂತೆ. ಮಹಿಳೆ ದೇಹವೆಲ್ಲ ಗಾಯವಾಗಿತ್ತಂತೆ. ಅಲ್ಲಿದ್ದ ಮಹಿಳಾ ಶಿಷ್ಯೆ ದಾತಿ ಮಹರಾಜನ್ ನಿನ್ನನ್ನು ಸ್ವೀಕರಿಸಿದ್ದಾರೆ. ಹಿಂದೆ ನನ್ನ ಪಾಳಿಯಾಗಿತ್ತು. ಈಗ ನಿನ್ನ ಪಾಳಿ. ಮುಂದೆ ಇನ್ನೊಬ್ಬರು ಬರ್ತಾರೆ. ನಿನ್ನ ಪಾಪವೆಲ್ಲ ತೊಳೆದು ಹೋಯ್ತೆಂದು ಸಮಾಧಾನ ಮಾಡ್ತಿದ್ದಳಂತೆ. ಅಲ್ಲಿ ನಡೆದ ಪ್ರತಿಯೊಂದು ಘಟನೆಯನ್ನು ಜನರ ಮುಂದಿಟ್ಟ ಮಹಿಳೆ ಸಾಯುವುದಕ್ಕಿಂತ ಮೊದಲು ನ್ಯಾಯ ಪಡೆಯಲು ಬಯಸುತ್ತೇನೆ. ನನ್ನ ಸ್ಥಿತಿ ಮತ್ತ್ಯಾರಿಗೂ ಬರದಿರಲಿ ಎಂದು ಹೇಳಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...