alex Certify
ಕನ್ನಡ ದುನಿಯಾ       Mobile App
       

Kannada Duniya

ದಿನೇ ದಿನೇ ಹೆಚ್ಚಾಗ್ತಿದೆ ಮಹಿಳೆ ಮೇಲಿನ ಅಪರಾಧ ಪ್ರಕರಣ

ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್ಸಿಆರ್ಬಿ) 2016ರ ಅಪರಾಧದ ವರದಿಯನ್ನು ಬಿಡುಗಡೆ ಮಾಡಿದೆ. ಮಹಿಳೆಯರ ಮೇಲಾಗುವ ಅಪರಾಧ ಪ್ರಕರಣದಲ್ಲಿ ಯಾವುದೇ ಇಳಿಕೆಯಾಗಿಲ್ಲ. 2014ಕ್ಕೆ ಹೋಲಿಸಿದ್ರೆ 2015ರಲ್ಲಿ ಮಹಿಳೆಯರ ಮೇಲಾಗುತ್ತಿರುವ ಅಪರಾಧ ಪ್ರಕರಣ ಇಳಿಕೆಯಾಗಿತ್ತು. ಆದ್ರೆ 2016ರಲ್ಲಿ ಶೇಕಡಾ 2.9ರಷ್ಟು ಏರಿಕೆಯಾಗಿದೆ.

ಹಿಂದಿನ ವರ್ಷದಂತೆ ಈ ವರ್ಷ ಕೂಡ ಮಹಿಳೆಯರ ಮೇಲೆ ಪತಿ ಹಾಗೂ ಅವರ ಕುಟುಂಬಸ್ಥರಿಂದಲೇ ಹೆಚ್ಚು ದಬ್ಬಾಳಿಕೆಯಾಗಿದೆ. ಒಂದು ದಶಲಕ್ಷಕ್ಕೂ ಹೆಚ್ಚು ದೂರು ದಾಖಲಾಗಿದೆ. ಎರಡನೇ ಸ್ಥಾನದಲ್ಲಿ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಪ್ರಕರಣದಲ್ಲೂ ಏರಿಕೆಯಾಗಿದ್ದು 84 ಸಾವಿರಕ್ಕೂ ಹೆಚ್ಚು ದೂರು ದಾಖಲಾಗಿದೆ.

ಅಪಹರಣ ಪ್ರಕರಣ ಮೂರನೇ ಸ್ಥಾನದಲ್ಲಿದ್ದು, 2015ಕ್ಕೆ ಹೋಲಿಸಿದ್ರೆ 4 ಸಾವಿರ ಪ್ರಕರಣ ಹೆಚ್ಚಾಗಿದೆ. ಮದುವೆ ಉದ್ದೇಶಕ್ಕಾಗಿ ಅಪಹರಣ ಮಾಡಿದ ಪ್ರಕರಣ ಹೆಚ್ಚಿದೆ. ಅತ್ಯಾಚಾರ ಪ್ರಕರಣ 2015ಕ್ಕಿಂತ 2016ರಲ್ಲಿ ಶೇಕಡಾ 12.4ರಷ್ಟು ಹೆಚ್ಚಿದೆ. ಅತಿ ಹೆಚ್ಚು ಪ್ರಕರಣ ಉತ್ತರ ಪ್ರದೇಶದಲ್ಲಿ ದಾಖಲಾದ್ರೆ ಅತಿ ಕಡಿಮೆ ಅಂದ್ರೆ ಶೇಕಡಾ 4ರಷ್ಟು ಪ್ರಕರಣ ಲಕ್ಷದ್ವೀಪದಲ್ಲಿ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...