alex Certify
ಕನ್ನಡ ದುನಿಯಾ       Mobile App
       

Kannada Duniya

ದಲಿತ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

ಮುಜಾಫರ್ ನಗರದಲ್ಲಿ ದಲಿತ ಯುವಕನಿಗೆ ಲಾಠಿ ಹಾಗೂ ಕೋಲಿನಿಂದ ಹೊಡೆದ ಘಟನೆ ಬೆಳಕಿಗೆ ಬಂದಿದೆ. ಥಳಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಎಚ್ಚೆತ್ತ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ದೇವಾನುದೇವತೆಗಳ ಪೋಸ್ಟರ್ ಹರಿದಿದ್ದಾನೆ ಎನ್ನುವ ಕಾರಣಕ್ಕೆ ಆತನಿಗೆ ನಾಲ್ವರು ಹೊಡೆದಿದ್ದಾರೆ. ಜೈ ಮಾತಾ ಜಿ ಎಂದು ಹೇಳುವಂತೆ ಯುವಕನಿಗೆ ಒತ್ತಾಯಿಸಿದ್ದಾರೆ. ಯುವಕ ತಲೆಗೆ ಹೆಲ್ಮೆಟ್ ಹಾಕಿಕೊಂಡಿದ್ದರಿಂದ ಯಾವುದೇ ಅಪಾಯವಾಗಿಲ್ಲ. ಸುತ್ತಮುತ್ತಲಿದ್ದ ಜನರು ಯುವಕನಿಗೆ ಹೊಡೆಯುವುದನ್ನು ನೋಡಿದ್ದಾರೆಯೇ ವಿನಃ ತಪ್ಪಿಸಲು ಹೋಗಿಲ್ಲ.

ಆರೋಪಿ ಯುವಕರ ಗುರುತು ಪತ್ತೆಯಾಗಿದೆ. ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. ಒದೆ ತಿಂದ ಯುವಕ ವಿಪಿನ್ ಕುಮಾರ್ ಎನ್ನಲಾಗಿದೆ. ಸಹರಾನ್ಪುರ್ ಹಿಂಸಾಚಾರದಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದ ಎನ್ನಲಾಗಿದೆ. ಘಟನೆ ನಂತ್ರ ಆತನನ್ನು ಜೈಲಿಗೆ ಕಳುಹಿಸಲಾಗಿತ್ತು. ಕೆಲ ದಿನಗಳ ಹಿಂದಷ್ಟೇ ವಿಪಿನ್ ಜೈಲಿನಿಂದ ಹೊರಗೆ ಬಂದಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...