alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟು ನಿಷೇಧದ ನಂತ್ರ ಮೂರು ಪಟ್ಟು ಹೆಚ್ಚಾಯ್ತು ಈ ಕ್ರೈಂ

ಕೇಂದ್ರ ಸರ್ಕಾರ ನೋಟು ನಿಷೇಧ ಮಾಡ್ತಿದ್ದಂತೆ ಡಿಜಿಟಲ್ ವಹಿವಾಟು ಹೆಚ್ಚಾಗಿದೆ. ಇದ್ರ ಜೊತೆಗೆ ಸೈಬರ್ ಕ್ರೈಂ ಕೂಡ ಹೆಚ್ಚಾಗಿದೆ. ಕಳೆದ ಒಂದು ವರ್ಷದಿಂದ ಸೈಬರ್ ಕ್ರೈಂ ಮೂರು ಪಟ್ಟು ಹೆಚ್ಚಾಗಿದೆ. ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಜೊತೆಗೆ ನೋಯ್ಡಾದ ಸೈಬರ್ ಕ್ರೈಂ ಇನ್ವೆಸ್ಟಿಗೇಷನ್ ಸೆಂಟರ್ ಕೂಡ ಇದನ್ನು ದೃಢಪಡಿಸಿದೆ.

ಸೈಬರ್ ಕ್ರೈಂ ಹೆಚ್ಚಾಗ್ತಿದೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಹಾಗೂ ಸೈಬರ್ ಕ್ರೈಂ ತಡೆಗಟ್ಟಲು ದೇಶದಲ್ಲಿ ಸಂಪನ್ಮೂಲದ ಕೊರತೆ ಇದೆ ಎಂದು ಸೈಬರ್ ಅಪರಾಧ ವಿರೋಧಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಡಿಜಿಟಲ್ ಭಾರತ ಕನಸು ನನಸಾಗಬೇಕಾದ್ರೆ ಸೈಬರ್ ಕ್ರೈಂ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ.

ನೋಟು ನಿಷೇಧದ ನಂತ್ರ ಡೆಬಿಟ್, ಕ್ರೆಡಿಟ್ ಕಾರ್ಡ್ ವಹಿವಾಟು ಹೆಚ್ಚಳವಾಗಿದೆ. ಇದ್ರ ಲಾಭವನ್ನು ಸೈಬರ್ ಕ್ರೈಂ ಪಡೆಯುತ್ತಿದೆ. ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಕ್ಲೋನಿಂಗ್, ಅಪ್ಗ್ರೇಡೇಷನ್ ಹೆಸರಿನಲ್ಲಿ ಅಪರಾಧ ಮಾಡ್ತಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...