alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿ ಮಾರಾಟ ಮಾಡಲು ಅಪ್ಪಿತಪ್ಪಿ ದೆಹಲಿ ಪೊಲೀಸರಿಗೆ ಫೋನ್ ಮಾಡ್ದ..!?

ಮಾನವ ಕಳ್ಳ ಸಾಗಣೆ ಹಾಗೂ ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲ್ಪಡುವ ಹುಡುಗಿಯರ ರಕ್ಷಣೆಗೆ ಮುಂದಾದ ದೆಹಲಿ ಎಸ್ ಎಚ್ ಒ ಜಿಬಿ ರಸ್ತೆಯ ಕೆಲ ಸ್ಥಳಗಳಲ್ಲಿ ಫೋನ್ ನಂಬರ್ ಅಂಟಿಸಿ ಬಂದಿದ್ದರು. ಕೆಲ ದಿನಗಳ ಹಿಂದೆ ಎಸ್ ಎಚ್ ಒ ಸುನಿಲ್ ಕುಮಾರ್ ಗೆ ಕರೆಯೊಂದು ಬಂತು. ಅದ್ರ ಜಾಡು ಹಿಡಿದು ಹೋದ ಸುನಿಲ್ ಕುಮಾರ್ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ್ದಾರೆ.

ಆರೋಪಿ ಅಮರ್ ಎಂಬಾತ ಜಿಬಿ ರಸ್ತೆಯ ವೇಶ್ಯಾವಾಟಿಕೆ ಗೃಹದ ಮುಂದೆ ನಂಬರ್ ನೋಡಿದ್ದಾನೆ. ಆ ನಂಬರ್ ಗೆ ಕರೆ ಮಾಡಿ ಅಪ್ರಾಪ್ತ ಬಾಲಕಿಯನ್ನು ಮಾರಾಟ ಮಾಡಬೇಕಿತ್ತು ಎಂದಿದ್ದಾನೆ. ಪೊಲೀಸ್ ನಂಬರ್ ಎಂಬುದು ತಿಳಿಯದೇ ಅಮರ್ ಫೋನ್ ಮಾಡಿದ್ದು ಆತನ ಬಂಧನಕ್ಕೆ ಸುನಿಲ್ ಕುಮಾರ್ ಟೀಂ ಬಲೆ ಬೀಸಿದೆ.

ಆರಂಭದಲ್ಲಿ ದಲ್ಲಾಳಿ ರೂಪದಲ್ಲಿ ಒಬ್ಬ ಅಮರ್ ಬಳಿ ಹೋಗಿದ್ದಾರೆ. ಆತನಿಗೆ 2.3 ಲಕ್ಷ ರೂಪಾಯಿ ನೀಡುವುದಾಗಿ ಒಪ್ಪಂದ ಮಾಡಿಕೊಂಡು ಬಂದಿದ್ದಾರೆ. 20 ಸಾವಿರ ಮುಂಗಡ ನೀಡಿರುವ ಪೊಲೀಸ್ ಸಿಬ್ಬಂದಿ, ಸುನಿಲ್ ಕುಮಾರ್ ಹಾಗೂ ಅಮರ್ ಭೇಟಿಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ದಲ್ಲಾಳಿ ಭಾಷೆ ಕಲಿತ ಸುನಿಲ್ ಕುಮಾರ್, ಅಮರ್ ನನ್ನು ಭೇಟಿಯಾಗಿದ್ದಾನೆ. ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಅಮರ್ ದೆಹಲಿಗೆ ಕರೆ ತಂದಿದ್ದ ಎನ್ನಲಾಗಿದೆ. ಈಕೆಯನ್ನು ವೇಶ್ಯಾವಾಟಿಕೆಗೆ ತಳ್ಳುವುದು ಆತನ ಉದ್ದೇಶವಾಗಿತ್ತು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...