alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಶು ಅತ್ತಿದ್ದಕ್ಕೆ ವಾರ್ಡ್ ಬಾಯ್ ಏನ್ಮಾಡಿದ್ದಾನೆ ಗೊತ್ತಾ?

leg

ಡೆಹ್ರಾಡೂನ್ ನ ರೂರ್ಕಿಯಲ್ಲಿರೋ ಖಾಸಗಿ ಆಸ್ಪತ್ರೆಯೊಂದರ ವಾರ್ಡ್ ಬಾಯ್ ಪೈಶಾಚಿಕ ಕೃತ್ಯ ನಡೆಸಿದ್ದಾನೆ. ಪದೇ ಪದೇ ಅಳುತ್ತಿದೆ ಅನ್ನೋ ಕಾರಣಕ್ಕೆ ನವಜಾತ ಶಿಶುವಿನ ಕಾಲನ್ನೇ ಮುರಿದು ಹಾಕಿದ್ದಾನೆ. ಜನವರಿ 25ರಂದು ಈ ಮಗು ಜನಿಸಿತ್ತು.

ಉಸಿರಾಟದ ಸಮಸ್ಯೆ ಇದ್ದಿದ್ದರಿಂದ ಶಿಶುವನ್ನು ರೂರ್ಕಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ಜನವರಿ 28ರಂದು ಬೆಳಗಿನ ಜಾವ ಮಗು ಜೋರಾಗಿ ಅಳುತ್ತಿತ್ತು, ಎಷ್ಟೊತ್ತಾದ್ರೂ ಕಂದಮ್ಮ ಸುಮ್ಮನಾಗದೇ ಇದ್ದಿದ್ದು ನೋಡಿ ಕೋಪಗೊಂಡ ವಾರ್ಡ್ ಬಾಯ್ ಮಗುವಿನ ಒಂದು ಕಾಲನ್ನೇ ಮುರಿದು ಹಾಕಿದ್ದಾನೆ.

ಮೊದಲು ಈ ಕೃತ್ಯ ಬೆಳಕಿಗೆ ಬಂದಿರಲಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಡೆಹ್ರಾಡೂನ್ ಆಸ್ಪತ್ರೆಗೆ ದಾಖಲು ಮಾಡಿದಾಗ ಅಲ್ಲಿನ ವೈದ್ಯರು ಒಂದು ಕಾಲು ಫ್ರಾಕ್ಚರ್ ಆಗಿರೋದನ್ನು ಗಮನಿಸಿದ್ರು. ವಾರ್ಡ್ ಬಾಯ್ ನಡೆಸಿದ ಅಮಾನುಷ ಕೃತ್ಯದ ವಿಡಿಯೋ ಕೂಡ ಲಭ್ಯವಾಗಿದೆ. ಮಗುವಿನ ತಂದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...