alex Certify
ಕನ್ನಡ ದುನಿಯಾ       Mobile App
       

Kannada Duniya

ಪುಟ್ಟ ಮಗುವಿಗೆ ಕಾಟ ಕೊಟ್ಟ ಮಲತಾಯಿಗೆ ತಕ್ಕ ಶಾಸ್ತಿ

Crimestopperslogoಮಲತಾಯಿಯೊಬ್ಬಳು ಪುಟ್ಟ ಮಗುವಿಗೆ ಇನ್ನಿಲ್ಲದ ಕಷ್ಟ ಕೊಟ್ಟ ತಪ್ಪಿಗೆ ಈಗ ಕಂಬಿ ಎಣಿಸುವ ಪರಿಸ್ಥಿತಿ ಬಂದೊದಗಿದೆ. ಆಕೆಗೆ ಹದಿನೈದು ದಿನ ಸಾದಾ ಸಜೆ ಮತ್ತು ದಂಡ ವಿಧಿಸಲಾಗಿದೆ.

ಶಿವಮೊಗ್ಗ ನಗರದ ಬೊಮ್ಮನಕಟ್ಟೆ ವಾಸಿ ಉದಯ ಎಂಬುವರು ತಮ್ಮ ಮೊದಲ ಪತ್ನಿ ತೀರಿಕೊಂಡ ಬಳಿಕ ಎರಡನೇ ಮದುವೆಯಾಗಿದ್ದು, ಮೊದಲ ಪತ್ನಿಯ ಮಗಳು ಸಿಂಚನಾಗೆ ಮಲತಾಯಿಯಾಗಿ ಬಂದ ನಾಗರತ್ನ, ಅವಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ.

ಪ್ರತಿ ದಿನವೂ ಮನೆ ಕೆಲಸ ಮಾಡಿಸುವುದು. ದೈಹಿಕ, ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಳು. ಕೆಲಸ ಮಾಡದೆ ಇದ್ದರೆ ಸೌಟು, ಕೋಲಿನಿಂದ ಥಳಿಸುತ್ತಿದ್ದಳು. ಒಮ್ಮೆ ಸೌಟಿನಿಂದ ಮೈ, ಕೈಗೆಲ್ಲಾ ಬರೆ ಹಾಕಿದ್ದಳು. ಇದನ್ನು ಕಂಡ ಅಕ್ಕಪಕ್ಕದವರು ಆಲ್ಕೊಳದಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಗೆ ವಿಚಾರವನ್ನು ತಿಳಿಸಿದ್ದರು.

2013 ರಲ್ಲಿ ದೂರು ದಾಖಲಾಗಿದ್ದು, ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದ ನಂತರ, ಮಗುವಿಗೆ ಹಿಂಸೆ ಕೊಟ್ಟ ಆರೋಪಿ ಮಲತಾಯಿ ನಾಗರತ್ನಳಿಗೆ 15 ದಿನ ಸಾದಾ ಸಜೆ ಹಾಗೂ 500 ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...