alex Certify
ಕನ್ನಡ ದುನಿಯಾ       Mobile App
       

Kannada Duniya

ಹೆತ್ತ ತಾಯಿ ಮೇಲೆಯೇ ಅತ್ಯಾಚಾರ ನಡೆಸಿದ ವಿಕೃತ

rape-haryana

ತಾಯಿಯೆಂದರೆ ದೇವರ ಸಮಾನ. ಹೆತ್ತ ತಾಯಿಯ ಋಣವನ್ನುತೀರಿಸಲೂ ಸಾಧ್ಯವಿಲ್ಲ. ಆದರೆ ಕಾಮುಕನೊಬ್ಬ ತನ್ನ ವೃದ್ದ ತಾಯಿಯ ಮೇಲೆಯೇ ಅತ್ಯಾಚಾರವೆಸಗುವ ಮೂಲಕ ತನ್ನ ಕ್ರೌರ್ಯ ಪ್ರದರ್ಶಿಸಿರುವ ಹೇಯ ಘಟನೆಯೊಂದು ನಡೆದಿದೆ.

ಹೌದು. ಹರಿಯಾಣದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಖಡಿ ಹತಿನಾ ಠಾಣಾ ವ್ಯಾಪ್ತಿಯ ಅಂತರ್ಗತ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು, 65 ವರ್ಷದ ತಾಯಿ ಮೇಲೆ 34 ವರ್ಷದ ಕಾಮುಕ ಮಗ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅಷ್ಟೇ ಅಲ್ಲ ತಾಯಿ ಅದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಕಬ್ಬಿಣದ ರಾಡ್‌ ನಿಂದ ಕಾಲಿಗೆ ಜೋರಾಗಿ ಹೊಡೆದಿದ್ದು ತದನಂತರ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ ಎನ್ನಲಾಗಿದೆ.

ಈಗಾಗಲೇ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾಮುಕನನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಸಂತ್ರಸ್ತ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...