alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ-ಆಸೀಸ್ ಪಂದ್ಯದ ವೇಳೆ ನಡೆಯಿತು ಅನಾಹುತ

crik mur

ಬೆಂಗಳೂರು: ಮೊಹಾಲಿಯಲ್ಲಿ ನಡೆದ ವಿಶ್ವಕಪ್ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಬಗ್ಗುಬಡಿದಿದೆ. ವಿರಾಟ್ ಕೊಹ್ಲಿ ಆಟವಂತೂ ಅದ್ಭುತವಾಗಿತ್ತು. ಭಾರೀ ಕುತೂಹಲದಿಂದ ಕೂಡಿದ್ದ ಮ್ಯಾಚ್ ನೋಡುವಾಗಲೇ ಅನಾಹುತವೊಂದು ನಡೆದುಹೋಗಿದೆ.

ಆಸೀಸ್ ನೀಡಿದ್ದ ಗೆಲುವಿನ ಗುರಿಯನ್ನು ತಲುಪುವ ಸಂದರ್ಭದಲ್ಲಿ ಭಾರತದ ವಿರಾಟ್ ಕೊಹ್ಲಿ, ವೀರಾವೇಶದ ಬ್ಯಾಟಿಂಗ್ ಮಾಡುವುದನ್ನು ಕೋಟ್ಯಂತರ ಜನ ವೀಕ್ಷಿಸುತ್ತಿದ್ದರು. ಅಂತೆಯೇ ಬೆಂಗಳೂರಿನ ಜೆಸಿ ನಗರದ ಎಸ್.ಕೆ. ಗಾರ್ಡನ್ ಬಳಿ ದೊಡ್ಡ ಪ್ರೊಜೆಕ್ಟರ್ ಇಟ್ಟು, ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡಲಾಗುತ್ತಿತ್ತು. ಆಗ ಪಕ್ಕದ ಮನೆಯ ನಾಯಿಯೊಂದು ಜೋರಾಗಿ ಬೊಗಳಿದೆ. ಇದಕ್ಕೆ, ಆಕ್ಷೇಪಿಸಿದ ಕ್ರಿಕೆಟ್ ನೋಡುತ್ತಿದ್ದವರು, ನಾಯಿಯನ್ನು ಒಳಗೆ ಕಟ್ಟಿಹಾಕುವಂತೆ ಮನೆಯ ಯುವಕ ಅವಿನಾಶ್ ಗೆ ಹೇಳಿದ್ದಾರೆ.

ಅವಿನಾಶ್, ನೀವೇ ಜೋರಾಗಿ ಸೌಂಡ್ ಹಾಕಿಕೊಂಡು ನೋಡಿ ಎಂದಿದ್ದು, ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಅವಿನಾಶ್ ಹೇಳಿಕೆಯಿಂದ ಆಕ್ರೋಶಗೊಂಡ ಕೆನಡಿ ಎಂಬಾತ ಚಾಕುವಿನಿಂದ ಇರಿದಿದ್ದು, ಅವಿನಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಜೆಸಿ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು, ಮುಂದಿನ ಕ್ರಮ ಜರುಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...