alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಭೂಪನಿಗೆ ಮಹಿಳೆಯರ ಬೆನ್ನು ಸವರೋ ಹುಚ್ಚು

ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನು ಕೆಲವರಿಗೆ ಮಹಿಳೆಯರನ್ನು ಅಸಭ್ಯವಾಗಿ ಸ್ಪರ್ಷಿಸುವ ಚಟ. ಅದು ಕೂಡ ಸಾರ್ವಜನಿಕ ಸ್ಥಳಗಳಲ್ಲಿ.

ಮುಂಬೈನ ವಿನಯ್ ನಾಯರ್ ಎಂಬಾತನಿಗೂ ಇದೇ ಚಟವಿದೆ. ಬ್ಯಾಕ್ ಲೆಸ್ ಬ್ಲೌಸ್ ತೊಟ್ಟ ಮಹಿಳೆಯರು ಅಂದ್ರೆ ಇವನಿಗೆ ಪಂಚಪ್ರಾಣವಂತೆ. ತಾನು ಕೂಡ ಬ್ಯಾಕ್ ಲೆಸ್ ಬ್ಲೌಸ್ ಡಿಸೈನರ್ ಅಂತಾ ಈ ಭೂಪ ಹೇಳಿಕೊಳ್ತಾನೆ. ತನ್ನ ಫೇಸ್ಬುಕ್ ಪ್ರೊಫೈಲ್ ನಲ್ಲೇ ಅದನ್ನೆಲ್ಲ ಹಾಕಿಕೊಂಡಿದ್ದಾನೆ.

ಮುಂಬೈನ ಬೀದಿ ಬೀದಿ ಸುತ್ತಾಡುತ್ತ ಬೆನ್ನು ಪ್ರದರ್ಶಿಸೋ ಮಹಿಳೆಯರ ವಿಡಿಯೋ ಮಾಡ್ತಾನೆ. ಗುಟ್ಟಾಗಿ ಅದನ್ನು ರೆಕಾರ್ಡ್ ಮಾಡಿಕೊಂಡು ಬಂದು ತಾನೇ ಅವರ ಬೆನ್ನು ಸ್ಪರ್ಷಿಸಿದಂತೆ ಎಡಿಟ್ ಮಾಡಿ ವಿಡಿಯೋವನ್ನು ಜಾಲತಾಣಗಳಲ್ಲಿ ಅಪ್ಲೋಡ್ ಮಾಡೋದೇ ಇವನ ಕಾಯಕ.

ಈಗಾಗ್ಲೇ ಇಂತಹ 63 ವಿಡಿಯೋಗಳನ್ನು ವಿನಯ್ ನಾಯರ್ ರೆಕಾರ್ಡ್ ಮಾಡಿದ್ದಾನೆ. 100 ಮಹಿಳೆಯರ ಬೆನ್ನು ಸವರಿ ಅದನ್ನು ವಿಡಿಯೋ ಮಾಡಬೇಕು ಅನ್ನೋದು ಇವನ ಮುಂದಿರೋ ಚಾಲೆಂಜ್ ಅಂತೆ. ಇವನ ಹುಚ್ಚಾಟ ನೋಡಿ ಜನರು ಅಚ್ಚರಿಪಟ್ಟಿದ್ದಾರೆ. ಅಷ್ಟೇ ಅಲ್ಲ ಆದಷ್ಟು ಬೇಗ ಅವನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...