alex Certify
ಕನ್ನಡ ದುನಿಯಾ       Mobile App
       

Kannada Duniya

ಆಡಿ ಕಾರ್ ಕೊಳ್ಳುವ ಹುಚ್ಚಿನಲ್ಲಿ ಯುವಕ ಮಾಡಿದ್ದಾನೆ ನೀಚ ಕೃತ್ಯ

murder

ದೆಹಲಿಯ ಅಮರ್ ಕಾಲೋನಿಯಲ್ಲಿ ನಡೆದ 53 ವರ್ಷದ ಮಹಿಳೆಯ ಹತ್ಯೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಹಂತಕ ರೋಶನ್ ಅಲಿಯಾಸ್ ಬಲರಾಮ್ ಐಷಾರಾಮಿ ಬದುಕಿಗಾಗಿ ಈ ಕೃತ್ಯ ಎಸಗಿದ್ದ. ರೋಶನ್ ನೊಯ್ಡಾದ ರಸ್ತೆ ಬದಿಯಲ್ಲಿ ಮೋಮೋಸ್ ಮಾರುತ್ತಿದ್ದ ಹುಡುಗ.

ಮುಂದೊಂದು ದಿನ ಕಪ್ಪನೆಯ ಆಡಿ ಕಾರ್ ನಲ್ಲಿ ವಿಹರಿಸಬೇಕು ಅನ್ನೋದು ಅವನ ಕನಸಾಗಿತ್ತು. ತಿಂಗಳ ಹಿಂದಷ್ಟೆ ದೆಹಲಿಗೆ ಬಂದಿದ್ದ ರೋಶನ್, ಹೇಗಾದ್ರೂ ಮಾಡಿ ಬೇಗ ಹಣ ಮಾಡಬೇಕು ಅಂತಾ ಸ್ಕೆಚ್ ಹಾಕಲು ಶುರು ಮಾಡಿದ್ದ. ಅಡುಗೆಯವನ ವೇಷದಲ್ಲಿ ಸರಿತಾ ಜೈನ್ ಎಂಬುವವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡ.

ಮಂಗಳವಾರ ಬೆಳಗ್ಗೆ ತನ್ನ ಮೂವರು ಸ್ನೇಹಿತರೊಂದಿಗೆ ಆತ ಸರಿತಾ ಜೈನ್ ಮನೆಗೆ ಎಂಟ್ರಿ ಕೊಟ್ಟಿದ್ದ. ಆ ಸಮಯದಲ್ಲಿ ಸರಿತಾ ಪತಿ ಮತ್ತು ಮಗ ಇಬ್ಬರೂ ಮನೆಯಲ್ಲಿರಲಿಲ್ಲ. ವಯಸ್ಸಾದ ಮನೆಗೆಲಸದ ಹೆಂಗಸು ಜೊತೆಗಿದ್ಲು. ನಾಲ್ವರೂ ಸೇರಿಕೊಂಡು ಅವಳನ್ನು ಕುರ್ಚಿಗೆ ಕಟ್ಟಿ ಹಾಕಿದ್ದಾರೆ.

ನಂತರ ಸರಿತಾಳನ್ನು ಕೊಂದು 23 ಲಕ್ಷ ಮೌಲ್ಯದ ಜ್ಯುವೆಲರಿ ಮತ್ತು ನಗದು ತೆಗೆದುಕೊಂಡು ಮನೆಗೆ ಹೊರಗಿನಿಂದ ಬೀಗ ಜಡಿದು ಪರಾರಿಯಾಗಿದ್ದಾರೆ. ಸರಿತಾಳ ಪತಿ ಮನೆಗೆ ಬರುವಷ್ಟರಲ್ಲಿ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ಲು. ಮನೆಗೆಲಸದ ಹೆಂಗಸು ಕೂಡ ಗಾಯಗೊಂಡಿದ್ಲು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ನೊಯ್ಡಾದ ಆಟ್ಟಾ ಮಾರ್ಕೆಟ್ ನಲ್ಲಿ ರೋಶನ್ ನ ಸಹಚರನನ್ನು ಬಂಧಿಸಿದ್ರು.

ಆತ ರೋಶನ್ ಮಾಡಿದ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ. ರೋಶನ್ ಸಾಮಾಜಿಕ ತಾಣದಲ್ಲಿ ಆ್ಯಕ್ಟಿವ್ ಆಗಿದ್ದ. ಬಲರಾಮ್ ಅನ್ನೋ ಹೆಸರಲ್ಲಿ ಪ್ರೊಫೈಲ್ ಹೊಂದಿದ್ದ. ಅದನ್ನು ಪತ್ತೆ ಮಾಡಿದ ಪೊಲೀಸರು ಅವನನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...