alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಖಾನ್ ಡ್ರಿಂಕ್ ಅಂಡ್ ಡ್ರೈವ್ ನಿಜ !

khan_final_2396620f

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಸಂಕಷ್ಟ ಇನ್ನೂ ಬಗೆಹರಿದಂತೆ ಕಾಣುತ್ತಿಲ್ಲ. 2015 ಸಲ್ಮಾನ್ ಖಾನ್ ಪಾಲಿಗೆ ಅದೃಷ್ಟದ ವರ್ಷ ಎಂದೇ ಹೇಳಲಾಗಿತ್ತು. ಅವರ ಅಭಿನಯದ ‘ಭಜರಂಗಿ ಭಾಯಿಜಾನ್’, ‘ಪ್ರೇಮ್ ರತನ್ ಧನ್ ಪಾಯೋ’ ಸಿನಿಮಾಗಳು ಭರ್ಜರಿ ಹಿಟ್ ಆಗಿದ್ದವು.

ಎರಡೂ ಸಿನಿಮಾಗಳು ಹಿಟ್ ಆಗಿದ್ದಲ್ಲದೇ, ಬಹು ಕಾಲದಿಂದ ಸಲ್ಮಾನ್ ಖಾನ್ ನೆಮ್ಮದಿಗೆ ಭಂಗ ತಂದಿದ್ದ, ಕಾರ್ ಅಪಘಾತ ಪ್ರಕರಣದಲ್ಲಿ ಮುಂಬೈ ಹೈಕೋರ್ಟ್ ನಿರ್ದೋಷಿ ಎಂದು ತೀರ್ಪು ನೀಡಿದ್ದು, ಸಲ್ಮಾನ್ ನಿರಾಳರಾಗುವಂತೆ ಮಾಡಿತ್ತು. ಹಾಗಾಗಿ ತಮ್ಮ 50ನೇ ವರ್ಷದ ಬರ್ತಡೇಯನ್ನು ಸಲ್ಮಾನ್ ಭರ್ಜರಿಯಾಗಿಯೇ ಆಚರಿಸಿಕೊಂಡಿದ್ದರು. ಇದೀಗ ಅವರಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಮುಂಬೈ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದೆ.

ಈ ಮೇಲ್ಮನವಿಯ ವಿಚಾರಣೆ ನಡೆದಿದ್ದು, ಘಟನೆಯ ದಿನದಂದು ಸಲ್ಮಾನ್ ಮದ್ಯಪಾನ ಮಾಡಿ, ಅವರೇ ಕಾರ್ ಚಾಲನೆ ಮಾಡಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ. ಮುಂಬೈ ಹೈಕೋರ್ಟ್ ನೀಡಿರುವ ತೀರ್ಪು ಅಸಮಂಜಸವಾಗಿದೆ ಎಂದು ಅವರು ಆರೋಪಿಸಿದ್ದು, ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ. ಎಸ್. ಖೆಹರ್, ಸಿ.ನಾಗಪ್ಪ ಅವರ ಪೀಠ ವಿಚಾರಣೆಯನ್ನು ಫೆಬ್ರವರಿ 12 ಕ್ಕೆ ಮುಂದೂಡಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...